ಜನತಾ ಕರ್ಫ್ಯೂ : ನಾಳೆ ಉಡುಪಿ ನಗರದಾದ್ಯಂತ ಸಂಚರಿಸುವ ಎಲ್ಲಾ ಸಿಟಿ ಬಸ್ ಗಳು ಸ್ಥಗಿತ -Vishwanews24

Featured, ಉಡುಪಿ

ಜನತಾ ಕರ್ಫ್ಯೂ : ನಾಳೆ ಉಡುಪಿ ನಗರದಾದ್ಯಂತ ಸಂಚರಿಸುವ ಎಲ್ಲಾ ಸಿಟಿ ಬಸ್ ಗಳು ಸ್ಥಗಿತ

ಉಡುಪಿ ಸಿಟಿ ಬಸ್ ಮಾಲಕ ಸಂಘ ಮತ್ತು ಸಿಟಿ ಬಸ್ ನೌಕರರ ಸಂಘ ದಿಂದ ಬೆಂಬಲ

ಉಡುಪಿ:ಪ್ರಧಾನಿ ನರೇಂದ್ರ ಮೋದಿಯವರು ಕೊರೊನದ ವಿರುದ್ಧ ಸಮರಸಾರಲು ಮುಂಜಾಗ್ರತ ಕ್ರಮವಾಗಿ ನಾಳೆ ಬೆಳಿಗ್ಗೆ 7 ರಿಂದ 9 ಗಂಟೆಯವರೆಗೂ ಜನರು ಜನತಾ ಕರ್ಫ್ಯೂ ಗೆ ಬೆಂಬಲಿಸುವಂತೆ ಹೇಳಿದ್ದಾರೆ .

ದಿನಾಂಕ 22 ಮಾರ್ಚ್, ಭಾನುವಾರದಂದು ಬೆಳಿಗ್ಗೆ 7 ರಿಂದ 9 ಗಂಟೆಯವರೆಗೂ ರಾಷ್ಟಾದ್ಯಂತ ಜನತಾ ಕರ್ಫ್ಯೂ ಪಾಲಿಸುವಂತೆ ಮನವಿ ಸ್ವಸ್ಥ ಭಾರತಕ್ಕಾಗಿ ಮತ್ತು ನಮ್ಮೆಲ್ಲರ ಆರೋಗ್ಯದ ಹಿತ ದೃಷ್ಟಿಯಿಂದ ಸರ್ಕಾರದ ನಿಲುವುಗಳಿಗೆ ಸಹಕರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಆದ್ದರಿಂದ ನಮ್ಮ ಉಡುಪಿ ನಗರದಾದ್ಯಂತ ಸಂಚರಿಸುವ ಎಲ್ಲಾ ಸಿಟಿ ಬಸ್ ಗಳು ಸ್ಥಗಿತಗೊಳ್ಳುತ್ತದೆ ಆದಿತ್ಯವಾರ ನಡೆಯುವ ಜನತಾ ಕರ್ಫ್ಯೂ ವನ್ನು ಬೆಂಬಲಿಸುವ ಮೂಲಕ ಕರೋನ ವೈರಸ್ ತಡೆಗಟ್ಟುವ ಹೋರಾಟದಲ್ಲಿ ಭಾಗಿಯಾಗುವಂತೆ ತಮ್ಮಲ್ಲಿ ವಿನಮ್ರ ವಿನಂತಿ ಎಂದು ಸಿಟಿ ಬಸ್ ನೌಕರರ ಸಂಘ ದ ಅಧ್ಯಕ್ಷರಾದ ಸಂತೋಷ್ ಪೂಜಾರಿ ರವರು ಹೇಳಿದ್ದಾರೆ .