ಜನತಾ ಕರ್ಫ್ಯೂಗೆ ಬೆಂಬಲ : ನಾಳೆ ದ.ಕ. ಜಿಲ್ಲಾದ್ಯಂತ ಖಾಸಗಿ ಬಸ್ ಸಂಚಾರ ಸ್ಥಗಿತ -Vishwanews24
ಮಂಗಳೂರು, : ಜನತಾ ಕರ್ಫ್ಯೂಗೆ ಬೆಂಬಲ ವ್ಯಕ್ತಪಡಿಸಿ ಮಾ.22ರಂದು ದ.ಕ.ಜಿಲ್ಲಾದ್ಯಂತ ಖಾಸಗಿ ಸಿಟಿ ಮತ್ತು ಸರ್ವಿಸ್ ಬಸ್ ಸಂಚಾರ ಸ್ಥಗಿತಗೊಳ್ಳಲಿದೆ. ಅದರೊಂದಿಗೆ ನಗರದ ಸೆಂಟ್ರಲ್ ಮಾರ್ಕೆಟ್, ಹೊಟೇಲ್ಗಳು ಕೂಡ ಬಂದ್ ಆಗುವ ಸಾಧ್ಯತೆ ನಿಚ್ಛಳವಾಗಿದೆ. ಈಗಾಗಲೆ ಗ್ರಾಮೀಣ ಭಾಗದ ಅನೇಕ ಬಸ್ಗಳು ಪ್ರಯಾಣಿಕರಿಲ್ಲದ ಕಾರಣ ದಿನಂಪ್ರತಿ ಕೆಲವು ಟ್ರಿಪ್ಗಳನ್ನು ಕಡಿತಗೊಳಿಸುತ್ತಿವೆ.
ಈ ಮಧ್ಯೆ ಕೊರೋನ ವೈರಸ್ ಹಬ್ಬದಂತೆ ಮಾ.22ರ ‘ಜನತಾ ಕರ್ಫ್ಯೂ’ ನಡೆಸಲು ಪ್ರಧಾನಿ ನೀಡಿದ ಕರೆಗೆ ಮಂಗಳೂರು ಸಹಿತ ದ.ಕ.ಜಿಲ್ಲಾದ್ಯಂತ ಸ್ಪಂದನೆ ವ್ಯಕ್ತವಾಗುತ್ತಿದೆ. ಅದಕ್ಕೆ ಪೂರಕವಾಗಿ ಮಾ.22ರಂದು ಸಿಟಿ ಮತ್ತು ಸರ್ವಿಸ್ ಬಸ್ ಸ್ಥಗಿತಗೊಳ್ಳಲಿದೆ ಎಂದು ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ರಾಜ್ ಆಳ್ವ ಮತ್ತು ಮಂಗಳೂರು ಪೂರ್ವ ವಲಯ ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.
