ರಾಜ್ಯದ ಜನತೆಗೆ ಬಿಗ್ ಶಾಕ್ ; ವಿದ್ಯುತ್ ದರ ಪ್ರತಿ ಯೂನಿಟ್ ಗೆ 35 ಪೈಸೆ  ಹೆಚ್ಚಳ ; ಏ.1ರಿಂದಲೇ ಜಾರಿಗೆ – Vishwanews24

Featured, ರಾಜ್ಯ ನ್ಯೂಸ್

ರಾಜ್ಯದ ಜನತೆಗೆ ಬಿಗ್ ಶಾಕ್ ; ವಿದ್ಯುತ್ ದರ ಪ್ರತಿ ಯೂನಿಟ್ ಗೆ 35 ಪೈಸೆ  ಹೆಚ್ಚಳ ; ಏ.1ರಿಂದಲೇ ಜಾರಿಗೆ 

ಬೆಂಗಳೂರು: ಇಂದು ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗದಿಂದ ವಿದ್ಯುತ್ ದರ ಪರಿಷ್ಕರಣೆ ಸಂಬಂಧ, ಮಹತ್ವದ ಸುದ್ಧಿಗೋಷ್ಠಿಯನ್ನು ನಡೆಸಲಾಯಿತು.

ಈ ಸುದ್ದಿಗೋಷ್ಠಿಯಲ್ಲಿ ಪ್ರತಿ ಯೂನಿಟ್ ಗೆ 35 ಪೈಸೆ ವಿದ್ಯುತ್ ದರ ಹೆಚ್ಚಳದ ಮಹತ್ವದ ಘೋಷಣೆಯನ್ನು ಘೋಷಿಸಿದೆ. ಏಪ್ರಿಲ್ 1ರಿಂದ ಈ ದರ ಏರಿಕೆ ಜಾರಿಗೆ ಬರಲಿದೆ. ಜೆಸ್ಕಾ, ಮೆಸ್ಕಾಂ, ಬೆಸ್ಕಾಂ ವ್ಯಾಪ್ತಿಯಲ್ಲಿ ಏಪ್ರಿಲ್ 1ರಿದಂ ಜಾರಿಗೆ ಬರುವಂತೆ ಪ್ರತಿ ಯೂನಿಟ್ ಗೆ 35 ಪೈಸೆ ಹೆಚ್ಚಳ ಮಾಡಲಾಗುತ್ತಿದೆ ಎಂಬುದಾಗಿ ಘೋಷಿಸಲಾಗಿದೆ.

ಇನ್ನೂ ವಿದ್ಯುತ್ ದರದ ಹೆಚ್ಚಳದ ಜೊತೆಗೆ ನಿಗದಿತ ಶುಲ್ಕವನ್ನು ಕೂಡ ಏರಿಕೆ ಮಾಡಲಾಗಿದೆ. ಫಿಕ್ಸಿಡ್ ಚಾರ್ಜ್ ಅನ್ನೂ ರೂ.10 ರಿಂದ 30ಕ್ಕೆ ಹೆಚ್ಚಳ ಮಾಡಲಾಗಿದೆ. ಈ ಮೂಲಕ ಕೆ ಇ ಆರ್ ಸಿ ವಿದ್ಯುತ್ ಬಳಕೆದಾರರಿಗೆ ಬಿಗ್ ಶಾಕ್ ನೀಡಿದೆ.

ಇಂಧನ ದರ, ಅಗತ್ಯ ವಸ್ತುಗಳ ದರ ಏರಿಕೆ ನಂತ್ರ, ಈಗ ರಾಜ್ಯದ ಜನತೆಗೆ ವಿದ್ಯುತ್ ದರ ಏರಿಕೆ ಬರೆ ಶಾಕ್ ಇಂದು ಸಿಗಲಿದೆ. ಪ್ರತಿ ಯೂನಿಟ್ ಗೆ ಎಷ್ಟು ದರ ಏರಿಕೆ ಮಾಡಲಾಗುತ್ತಿದೆ ಎಂಬುದಾಗಿ ಕೆ ಇ ಆರ್ ಸಿ ಇಂದು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಲಿದೆ.

2009ರಂದು ಪ್ರತಿ ಯೂನಿಟ್ ಗೆ 34 ಪೈಸೆ ಏರಿಕೆ ಮಾಡಲಾಗಿತ್ತು. 2010ರಲ್ಲಿ ಪ್ರತಿ ಯೂನಿಟ್ ಗೆ 30 ಪೈಸೆ, 2011ರಲ್ಲಿ 28 ಪೈಸೆ, 2012ರಲ್ಲಿ 13 ಪೈಸೆ, 2017ರಲ್ಲಿ ಪ್ರತಿ ಯೂನಿಟ್ ಗೆ 48 ಪೈಸೆ, 2019ರಲ್ಲಿ 35 ಪೈಸೆ, 2020ರಲ್ಲಿ 30 ಪೈಸೆ ಹಾಗೂ 2020ರಲ್ಲಿ 30 ಪೈಸೆ ಪ್ರತಿ ಯೂನಿಟ್ ಗೆ ವಿದ್ಯುತ್ ದರವನ್ನು ಪರಿಷ್ಕರಿಸಲಾಗಿತ್ತು. ಇಂದು ಪ್ರತಿ ಯೂನಿಟ್ ಗೆ 35 ಪೈಸೆ ದರ ಏರಿಕೆ ಮಾಡಿ ಜನತೆಗೆ ಶಾಕ್ ನೀಡಿದೆ.

ಬೈಂದೂರು :  ಎಸ್ ಸಿಡಿಸಿಸಿ ಬ್ಯಾಂಕ್ ನ 110ನೇ ಶಾಖೆ ಉಪ್ಪುಂದದಲ್ಲಿ ಉದ್ಘಾಟನೆ – Vishwanews24

Leave a Reply