ಜನಮೆಚ್ಚಿನ ನಾಯಕ : ಭಾರತ ಜನರಿಂದ ಅತೀ ಹೆಚ್ಚು ಮೆಚ್ಚುಗೆ ಗಳಿಸಿದ ವ್ಯಕ್ತಿ ಪ್ರಧಾನಿ ಮೋದಿ ,2ನೇ ಸ್ಥಾನ ಧೋನಿ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾರತ ಜನರಿಂದ ಅತೀ ಹೆಚ್ಚು ಮೆಚ್ಚುಗೆ ಗಳಿಸಿದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಈ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ.

ಯುಗೌ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, 2019ರಲ್ಲಿ ಪ್ರಧಾನಿ ಮೋದಿ ಅತ್ಯಂತ ಮೆಚ್ಚುಗೆ ಪಡೆದ ವ್ಯಕ್ತಿ ಎನಿಸಿದರೆ, ಬಾಕ್ಸರ್ ಮೇರಿ ಕೋಮ್ ಅವರು ಅತ್ಯಂತ ಮೆಚ್ಚುಗೆ ಪಡೆದ ಮಹಿಳೆ ಎನಿಸಿಕೊಂಡಿದ್ದಾರೆ.

ಭಾರತದ ಜನಮೆಚ್ಚಿದ ನಾಯಕರ ಪೈಕಿ ನರೇಂದ್ರ ಮೋದಿ ಮೋದಿ 15.66% ಮತಗಳನ್ನು ಪಡೆದಿದ್ದಾರೆ. ವಿಶ್ವದ ಜನ ಮೆಚ್ಚಿದ ಪುರುಷ ಸೆಲೆಬ್ರೆಟಿ ಪೈಕಿ ಉದ್ಯಮಿ ಬಿಲ್‌ಗೇಟ್ಸ್ ಮೊದಲ ಸ್ಥಾನದಲ್ಲಿದ್ದರೆ, ಮಹಿಳಾ ವಿಭಾಗದಲ್ಲಿ ಅಮೇರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಪತ್ನಿ ಮೆಶೆಲ್ ಒಬಾಮ ಮೊದಲ ಸ್ಥಾನ ಪಡೆದಿದ್ದಾರೆ.
ಭಾರತೀಯ ಕ್ರೀಡಾ ವಿಭಾದಲ್ಲಿ ಎಂ.ಎಸ್.ಧೋನಿ 8.58% ಮತಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ವಿಶ್ವದ ಕ್ರೀಡಾಪಟುಗಳ ಪೈಕಿ ಫುಟ್ಬಾಲ್ ಪಟು ಕ್ರಿಸ್ಟಿಯಾನೋ ರೋನಾಲ್ಡೋ ಅಗ್ರಸ್ಥಾನ ಪಡೆದಿದ್ದಾರೆ. ಸಚಿನ್ ತೆಂಡುಲ್ಕರ್ (5.81%), ವಿರಾಟ್ ಕೊಹ್ಲಿ(4.46%) ನಂತರದ ಸ್ಥಾನದಲ್ಲಿದ್ದಾರೆ. ಮಹಿಳಾ ವಿಭಾಗದಲ್ಲಿ ಬಾಕ್ಸರ್ ಮೇರಿ ಕೋಮ್ (10.36%) ಮೊದಲ ಸ್ಥಾನ ಪಡೆದಿದ್ದಾರೆ.

ಉದ್ದಮಿ ರತನ್ ಟಾಟಾ ಶೇ.8.02, ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಶೇ.7.36 ಮತ್ತು ಬಿಲ್ ಗೇಟ್ಸ್ ಶೇ.6.96 ಜನರ ಮೆಚ್ಚಿನ ವ್ಯಕ್ತಿಗಳಾಗಿದ್ದಾರೆ.

ಈ ಪಟ್ಟಿಯಲ್ಲಿ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ 6ನೇ ಹಾಗೂ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 7ನೇ ಸ್ಥಾನ ಪಡೆದುಕೊಂಡಿದ್ದಾರೆ.