ಜನರಿಗೆ ಮಾಸ್ಕ್ ಹಾಕಿ ಎನ್ನುವ ಬದಲು ಒಂದಷ್ಟು ಎಚ್ಚರಿಕೆ ಕ್ರಮ ಕೈಗೊಳ್ಳುವ ಕೆಲಸ ಮಾಡಲಿ : ಸರ್ಕಾರಕ್ಕೆ ಯು.ಟಿ.ಖಾದರ್ ಆಗ್ರಹ – Vishwanews24

Featured, ರಾಜ್ಯ ನ್ಯೂಸ್

ಕೋವಿಡ್ ವಿಚಾರದಲ್ಲಿ ಜನರ ಮಧ್ಯೆ ಗೊಂದಲ ಸೃಷ್ಟಿ ಮಾಡಬಾರದು

ಮಾಧ್ಯಮಗಳು, ಸೋಶಿಯಲ್ ಮೀಡಿಯಾದಲ್ಲಿ ಬಂದಿದ್ದೇ ನಿಜ ಎಂದು ತಿಳಿಯಬಾರದು.

ಭಯದ ವಾತಾವರಣದಲ್ಲಿ ಸಿಲುಕಿಸುವ ಕೆಲಸ ಆಗಬಾರದು..

ಸರ್ಕಾರಕ್ಕೆ ಶಾಸಕ ಯು.ಟಿ.ಖಾದರ್ ಆಗ್ರಹ

ಬೆಂಗಳೂರು: ಜನರಿಗೆ ಮಾಸ್ಕ್ ಹಾಕಿ ಎನ್ನುವ ಬದಲು ಒಂದಷ್ಟು ಎಚ್ಚರಿಕೆ ಕ್ರಮ ಕೈಗೊಳ್ಳುವ ಕೆಲಸ ಮಾಡಲಿ. ಆಕ್ಸಿಜನ್ ಪ್ಲಾಂಟ್ ಕ್ವಾಲಿಟಿ ಚೆಕ್ ಮಾಡಿಕೊಳ್ಳಬೇಕು. ಅನುಷ್ಠಾನ ಮಾಡುವಾಗ ದೂರದೃಷ್ಟಿ ಆಲೋಚನೆ ಆಗಬೇಕು. ಗಡಿಬಿಡಿಯಲ್ಲಿ ಸರ್ಕಾರ ಕೆಲಸ ಮಾಡಬಾರದು ಎಂದು ಶಾಸಕ ಯು.ಟಿ.ಖಾದರ್  ಸರ್ಕಾರಕ್ಕೆ ಆಗ್ರಹಿಸಿದರು.

ಸುವರ್ಣಸೌಧ  ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ವಿಚಾರದಲ್ಲಿ ಜನರ ಮಧ್ಯೆ ಗೊಂದಲ ಸೃಷ್ಟಿ ಮಾಡಬಾರದು. ಜನರಿಗೆ ಆತಂಕ ತರಿಸಬಾರದು. ಮಾಧ್ಯಮಗಳು, ಸೋಶಿಯಲ್ ಮೀಡಿಯಾದಲ್ಲಿ ಬಂದಿದ್ದೇ ನಿಜ ಎಂದು ತಿಳಿಯಬಾರದು. ಚೈನಾದಲ್ಲಿ ಪರಿಸ್ಥಿತಿ ಏನಾಗಿದೆ ಅಂತ ನೋಡ್ಬೇಕು. ಜನರಿಗೆ ಜಾಗೃತಿ ಮೂಡಿಸಬೇಕು ಎಂದರು.

ಭಯದ ವಾತಾವರಣದಲ್ಲಿ ಸಿಲುಕಿಸುವ ಕೆಲಸ ಆಗಬಾರದು. ಯಾವ ದೇಶದಲ್ಲಿ ದೊಡ್ಡ ಅನಾಹುತ ಆಗಿದೆ ಎಂದು ಮಾಹಿತಿ ಬಂದಿಲ್ಲ. ಈ ಸೋಂಕಿನ ತೀವ್ರತೆ, ಸಾವು ಎಷ್ಟು ಆಗುತ್ತೆ ಅನ್ನೋದನ್ನ ಮಾಹಿತಿ ತಿಳಿಸಬೇಕು. ಚಳಿಗಾಲದಲ್ಲಿ ಕೆಲ ಸೋಂಕು ಬಂದು ಹೋಗುತ್ತೆ ಎಂದು ಹೇಳಿದರು.

ಉಡುಪಿ: 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಮುಂಜಾಗ್ರತಾ ಡೋಸ್ ಲಸಿಕೆ ಪಡೆಯುವುದು ಅಗತ್ಯ – VIshwanews24

ಕೋವಿಡ್  ಸಂಬಂಧಿಸಿದಂತೆ ಸರ್ಕಾರ ಜನರ ಮಧ್ಯೆ ಗೊಂದಲ ಸೃಷ್ಟಿಸಬಾರದು. ಚೀನಾದಲ್ಲಿ ಆಗಿರುವ ಕೋವಿಡ್ ಬಗ್ಗೆ ನಿಜಾಂಶ ತಿಳಿದುಕೊಳ್ಳಬೇಕು. ಬಿಎಫ್ 7 ಬಗ್ಗೆ ತಳಿಯಿಂದ ಹೇಗೆ ಜಾಗೃತಿ ಆಗಬೇಕು ಎಂದು ಸರ್ಕಾರ ತಿಳಿಸಲಿ. ಯಾವುದೇ ದೇಶದಲ್ಲಿ ದೊಡ್ಡ ಮಟ್ಟದ ಅನಾಹುತದ ಬಗ್ಗೆ ಮಾಹಿತಿ ಇಲ್ಲ. ವಿಶ್ವ ಆರೋಗ್ಯ ಸಂಸ್ಥೆ ಕೊಟ್ಟಿರುವ ಮಾಹಿತಿ ಬಗ್ಗೆ ಸರ್ಕಾರ ಸ್ಪಷ್ಟತೆ ಕೊಡಲಿ ಎಂದು ತಿಳಿಸಿದರು.

 

Leave a Reply