ಜನವರಿ 31 ಮತ್ತು ಫೆ.1ರಂದು ಬ್ಯಾಂಕ್ ಮುಷ್ಕರ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರುರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನ ವಿರೋಧಿಸಿ ಅಖಿಲ ಭಾರತ ರಾಷ್ಟ್ರೀಕೃತ ಬ್ಯಾಂಕ್‌ ಅಧಿಕಾರಿಗಳ ಫೆಡರೇಶನ್‌ ಹಾಗು ಇತರ ಸಂಘಸಂಸ್ಥೆಗಳ ಒಕ್ಕೂಟ ಜನವರಿ 31 ಮತ್ತು ಫೆ.1ರಂದು ಎರಡು ದಿನಗಳ ಬ್ಯಾಂಕುಗಳ ಮುಷ್ಕರಕ್ಕೆ ಕರೆ ನೀಡಿದೆ.

ಬೇಡಿಕೆ ಈಡೇರದಿದ್ದರೆ ಏಪ್ರಿಲ್‌ 1ರಿಂದ ಅನಿರ್ಧಿಷ್ಟ ಕಾಲ ಮುಷ್ಕರವನ್ನೂ ಸಹ ಹಮ್ಮಿಕೊಂಡಿರುವುದಾಗಿ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟ ತಿಳಿಸಿದೆ.

ರಾಷ್ಟ್ರವ್ಯಾಪಿ ಮುಷ್ಕರದ ಕರೆಯಿಂದ ಬ್ಯಾಂಕುಗಳ ವಹಿವಾಟಿಗೆ ಧಕ್ಕೆಯಾಗಬಹುದು. ಖಾಸಗೀಕರಣಗೊಳಿಸುವ ಉದ್ದೇಶದಿಂದ ಸರಕಾರವು ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ಮುಂದಾಗಿದೆ ಎಂದು ಕೆನರಾ ಬ್ಯಾಂಕ್‌ ಅಧಿಕಾರಿಗಳ ಅಸೋಸಿಯೆಶನ್‌ ಚೇರ್ಮನ್‌ ಜೆ.ಎಸ್‌.ಜಗದೀಶ ತಿಳಿಸಿದ್ದಾರೆ.

 

ವೇತನ ಪರಿಷ್ಕರಣೆ, ಸಿಬ್ಬಂದಿ ಕಲ್ಯಾಣ ನಿಧಿಯ ಹಂಚಿಕೆ, ವಿಶೇಷ ವೇತನವನ್ನು ಮೂಲ ವೇತನದೊಡನೆ ವಿಲೀನಗೊಳಿಸುವುದು, ಬ್ಯಾಂಕುಗಳ ವಹಿವಾಟು ವಾರದಲ್ಲಿ ಐದು ದಿನಗಳಿಗೆ ಮಿತಿಗೊಳಿಸುವುದು, ಮತ್ತು ನಿವೃತ್ತ ಬ್ಯಾಂಕ್‌ ಅಧಿಕಾರಿಗಳ ಪಿಂಚಣಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಕೇಂದ್ರ ಸರಕಾರ ತಕ್ಷಣವೇ ಈಡೇರಿಸಬೇಕು ಎಂದು ಫೆಡರೇಷನ್‌ ಒತ್ತಾಯಿಸಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಪಂಡಿತ್ ವೈದಿಕ ಶ್ರೀ ಗಣಪತಿ ಭಟ್

ಸರ್ವರಿಗೂ ಆದರದ ಸ್ವಾಗತ