ಜನವರಿ 31 ರವರೆಗೆ ಅಂತರರಾಷ್ಟ್ರೀಯ ವಿಮಾನ ಸ್ಥಗಿತ -Vishwanews24
ನವದೆಹಲಿ, : ಭಾರತಕ್ಕೆ ಅಂತರರಾಷ್ಟ್ರೀಯ ವಿಮಾನಯಾನ ಕಾರ್ಯಾಚರಣೆಯು ಜನವರಿ 31 ರವರೆಗೆ ಸ್ಥಗಿತಗೊಳಿಸಿದೆ ಎಂದು ಕೇಂದ್ರ ಬುಧವಾರ ತಿಳಿಸಿದೆ.
“ಈ ನಿರ್ಬಂಧವು ಅಂತರರಾಷ್ಟ್ರೀಯ ಆಲ್-ಕಾರ್ಗೋ ವಿಮಾನ ಮತ್ತು ಡಿಜಿಸಿಎ (ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ಅನುಮೋದಿಸಲ್ಪಟ್ಟ ವಿಮಾನಗಳಿಗೆ ಅನ್ವಯಿಸುವುದಿಲ್ಲ” ಎಂದು ಅಧಿಕೃತ ಹೇಳಿಕೆಯಲ್ಲಿ ಕೇಂದ್ರ ಬುಧವಾರ ತಿಳಿಸಿದೆ.
“ಆದರೆ ಪ್ರಾಧಿಕಾರವು ಕೆಲವೊಂದು ಕಡೆಗೆ ಅಂತರರಾಷ್ಟ್ರೀಯ ನಿಗದಿತ ವಿಮಾನಗಳನ್ನು ಅನುಮತಿಸಬಹುದು” ಎಂದು ಕೂಡಾ ಇದರಲ್ಲಿ ಉಲ್ಲೇಖ ಮಾಡಲಾಗಿದೆ.ಪ್ರಸ್ತುತ, ಭಾರತವು ಹಲವಾರು ದೇಶಗಳೊಂದಿಗೆ ‘ಏರ್ ಬಬಲ್’ ಒಪ್ಪಂದಗಳನ್ನು ಮಾಡಿಕೊಂಡಿದೆ.
ಈ ಒಪ್ಪಂದವು ಎರಡೂ ದೇಶಗಳ ಪ್ರಜೆಗಳಿಗೆ ಉಭಯ ದೇಶಗಳಿಗೆ ವಿಮಾನ ಸಂಚಾರ ನಡೆಸಲು ಅನುವು ಮಾಡಿಕೊಡುತ್ತದೆ.
ಕೊರೊನಾ ಕಾರಣದಿಂದ ಮಾರ್ಚ್ 25 ರಂದು ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಬಳಿಕ ದೇಶೀಯ ವಿಮಾನ ಸೇವೆಗಳು ಮೇ 25 ರಿಂದ ಪುನರಾರಂಭಗೊಂಡವು.
