ಜಬರ್ ದಸ್ತ್ ಆಗಿ ನ.8ರಂದು ತೆರೆಯ ಮೇಲೆ ಬರಲು ಸಜ್ಜಾಗಿ ನಿಂತಿದೆ ಅರ್ಜುನ್ ಕಾಪಿಕಾಡ್ ಅಭಿನಯದ ತುಳು ಸಿನೆಮಾ ‘ಜಬರ್ ದಸ್ತ್ ಶಂಕರ’ -Vishwanews24
ಮಂಗಳೂರು: ದೇವದಾಸ್ ಕಾಪಿಕಾಡ್ ನಿರ್ದೇಶಿಸಿರುವ ಅರ್ಜುನ್ ಕಾಪಿಕಾಡ್ ಅಭಿನಯದ ತುಳು ಸಿನೆಮಾ ‘ಜಬರ್ ದಸ್ತ್ ಶಂಕರ’ ಜಬರ್ ದಸ್ತ್ಆಗಿ ತೆರೆಯ ಮೇಲೆ ಬರಲು ಸಜ್ಜಾಗಿ ನಿಂತಿದೆ.
ನಿಶ್ಮಿತಾ ಹಾಗೂ ನೀತು ನಾಯಕಿಯರಾಗಿ ಅಭಿನಯಿಸಿರುವ ಈ ಸಿನೆಮಾ ನ.8ರ ಶುಕ್ರವಾರ ತೆರೆಗೆ ಬರಲಿದೆ.
ಜಲನಿಧಿ ಪ್ರೋಡಕ್ಷನ್ ಹಾಗೂ ಬೊಳ್ಳಿ ಮೂವೀಸ್ ಅರ್ಪಿಸುವ ಈ ಸಿನೆಮಾವನ್ನು ಅನಿಲ್ ಕುಮಾರ್ ಹಾಗೂ ಲೋಕೇಶ್ ಕೋಟ್ಯಾನ್ ನಿರ್ಮಿಸಿದ್ದಾರೆ.
ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರೇ ಕಥೆ, ಸಂಭಾಷಣೆ, ಸಾಹಿತ್ಯ ಬರೆದಿದ್ದು, ಮಾಸ್ ಮಾಸ ಸ್ಟಂಟ್ ಮಾಸ್ಟರ್ ಆಗಿದ್ದು, ಸಿದ್ದು ಛಾಯಾಗ್ರಹಣ ನಿರ್ವಹಿಸಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡಿದ್ದಾರೆ.
ಸತೀಶ್ ಬಂದಳೆ, ಸಾಯ್ ಕೃಷ್ಣ ಕುಡ್ಲ, ದೇವದಾಸ್ ಕಾಪಿಕಾಡ್ ಮುಂತಾದ ಹಿರಿಯ ಕಲಾವಿದರು ಅಭಿನಯಿಸಿದ್ದಾರೆ.
ಇದೊಂದು ಥ್ರಿಲ್ಲರ್ ಅಥವ ರೋಮ್ಯಾಂಟಿಕ್ ಅಥವ ತುಳು ಕೊಮೆಡಿ ಚಿತ್ರವೇ ಎಂಬ ಚರ್ಚ್ ಶುರುವಾಗಿದೆ. ತುಳು ಸಿನಿಮಾ ಅಂದ್ರೆ ಹಾಸ್ಯ ಇರಲೇ ಬೇಕು. ಮಾಮೂಲಿ ಹಾಸ್ಯವಲ್ಲ. ರಸಭರಿತ ಹಾಸ್ಯ ಹೊನಲು ಇದ್ದೇ ಇರುತ್ತದೆ.
ಆದರೆ, ಯಾವ ಹೂರಣದ ಚಿತ್ರ ಎಂಬ ಬಗ್ಗೆ ಸಿನಿಮಾದ ಯಾವೊಬ್ಬರು ಕೂಡ ಮಾಹಿತಿ ಬಿಟ್ಟು ಕೊಡುತ್ತಿಲ್ಲ. ಸದ್ಯದಲ್ಲೇ ಟೀಸರ್ ಬಿಡುಗಡೆ ಮಾಡುತ್ತಿದ್ದೇವೆ ಎಂದಿದ್ದಾರೆ. ಕಡು ಹಳದಿ ಅಂಗಿ ಧರಿಸಿ ಫೈಟ್ ಪೋಸ್ ನೀಡಿರುವುದನ್ನು ಗಮನಿಸಿದರೆ ಅರ್ಜುನ್ ಕಾಫಿಕಾಡ್ ಯ್ಯಂಗ್ರಿ ಯಂಗ್ ಮ್ಯಾನ್ ಪೆಟ್ಟಿಸ್ಟ್ ಪಾತ್ರದಂತೆ ಕಾಣಿಸುತ್ತಿದೆ. ಬೇರೆ ಚಿತ್ರಗಳಿಗಿಂತ ಸ್ವಲ್ಪ ಹೆಚ್ಚೇ ಹೊಡೆದಾಟ ದೃಶ್ಯಗಳು ಇವೆ ಎಂದೂ ಹೇಳಲಾಗುತ್ತಿದೆ. ತುಳು ಚಿತ್ರರಂಗದಲ್ಲಿ ಬದಲಾವಣೆ ಗಾಳಿ ಆಗಲೇ ಬೀಸುತ್ತಿದ್ದು, ಜಬರ ದಸ್ತ್ ಶಂಕರ ಚಿತ್ರ ಕುತೂಹಲ ಹುಟ್ಟಿಸಿದೆ.
