ಜಾತ್ರೆಯಲ್ಲಿ ತಂದೆಯ ಕೈಯಿಂದ ಆಕಸ್ಮಿಕವಾಗಿ ಜಾರಿ ಬಿದ್ದ ಬಾಲಕಿ ರಥದ ಚಕ್ರದಡಿ ಸಿಲುಕಿ ಸಾವು – Vishwanews24

Featured, ರಾಷ್ಟ್ರ ನ್ಯೂಸ್

ಜಾತ್ರೆಯಲ್ಲಿ ತಂದೆಯ ಕೈಯಿಂದ ಆಕಸ್ಮಿಕವಾಗಿ ಜಾರಿ ಬಿದ್ದ ಬಾಲಕಿ ರಥದ ಚಕ್ರದಡಿ ಸಿಲುಕಿ ಸಾವು

ಕೊಲ್ಲಂ: ಜಾತ್ರೆಯಲ್ಲಿ ತಂದೆಯ ಕೈಯಿಂದ ಆಕಸ್ಮಿಕವಾಗಿ ಜಾರಿ ಬಿದ್ದ ಬಾಲಕಿ ರಥದ ಚಕ್ರದಡಿ ಸಿಲುಕಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಕೇರಳದ ಕೊಲ್ಲಂನಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.

ಚವರ ಮೂಲದ ರಮೇಶನ್ ಹಾಗೂ ಜೀಜಿ ದಂಪತಿಯ ಪುತ್ರಿ ಕ್ಷೇತ್ರ(5) ಮೃತಪಟ್ಟ ಬಾಲಕಿ. ಕ್ಷೇತ್ರ ಅಪ್ಪ ಅಮ್ಮನೊಂದಿಗೆ ಕೊಟ್ಟಂಕುಳಂಗರ ದೇವಸ್ಥಾನದ ಜಾತ್ರೆಗೆ ಬಂದಿದ್ದಾಳೆ. ರಥ ಎಳೆಯುವ ಸಂದರ್ಭ ಜನರ ನೂಕುನುಗ್ಗಲು ಹೆಚ್ಚಾಗಿ, ಕ್ಷೇತ್ರ ಅಪ್ಪನ ಕೈಯಿಂದ ಆಕಸ್ಮಿಕವಾಗಿ ಜಾರಿ ಕೆಳಗೆ ಬಿದ್ದಿದ್ದಾಳೆ. ಬಳಿಕ ಬಾಲಕಿಯ ಮೇಲೆ ರಥದ ಚಕ್ರ ಹರಿದಿದೆ. ಪರಿಣಾಮ ಕ್ಷೇತ್ರ ಸಾವನ್ನಪ್ಪಿದ್ದಾಳೆ.

ಅಕ್ರಮ ದತ್ತು ಮಗು ಪ್ರಕರಣ : ಸೋನು ಗೌಡಗೆ 14 ದಿನ ನ್ಯಾಯಾಂಗ ಬಂಧನ – Vishwanews24

ಕ್ಷೇತ್ರಳ ಮೇಲೆ ಚಕ್ರ ಹರಿದ ಬಳಿಕ ತಕ್ಷಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ. ಇನ್ನು ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಬೆಂಕಿ ಅವಘಡ : 13 ಮಂದಿಗೆ ಗಾಯ – Vishwanews24

Leave a Reply