ಜಿತೇಶ್ ವತಿಯಿಂದ ಅಯ್ಯಪ್ಪ ಮಾಲೆ ಧರಿಸುತ್ತಿದ್ದ ಸಹ ಮಾಲಾಧಾರಿಗಳಿಗೆ ಕಿಟ್ ವಿತರಣೆ.: vishwanews24
ಜಿತೇಶ್ ವತಿಯಿಂದ ಅಯ್ಯಪ್ಪ ಮಾಲೆ ಧರಿಸುತ್ತಿದ್ದ ಸಹ ಮಾಲಾಧಾರಿಗಳಿಗೆ ಕಿಟ್ ವಿತರಣೆ.
ಕಾಪು: ಉಚ್ಚಿಲ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ಅಯ್ಯಪ್ಪ ಭಕ್ತ ವೃಂದ ಉಚ್ಚಿಲ ಇದರ ಸದಸ್ಯರಿಗೆ ಜೀತೇಶ್ ಕುಮಾರ್ ಮೂಳೂರು ಇವರಿಂದ ಕಿಟ್ ವಿತರಣೆ ಮಾಡಲಾಯಿತು.
ದಾನಿಗಳಾದ ಜೀತೇಶ್ ಕುಮಾರ್ ಮೂಳೂರು ಇವರು ಅನೇಕ ವರ್ಷಗಳಿಂದ ಉಚ್ಚಿಲ ಬಬ್ಬು ಸ್ವಾಮಿ ಕ್ಷೇತ್ರದ ಅಯ್ಯಪ್ಪ ಭಕ್ತ ವೃಂದದ ಅಯ್ಯಪ್ಪ ಶಿಬಿರದಲ್ಲಿ ಮಾಲೆ ಧರಿಸುತ್ತಿದ್ದು ತನ್ನ ಸಹ ಮಾಲಾದಾರಿ ಅಯ್ಯಪ್ಪ ಭಕ್ತರಲ್ಲಿ ಕರ್ಪ್ಯೂನಿಂದ ತೊಂದರೆ ಒಳಗಾದವರಿಗೆ ಅಕ್ಕಿ ಮತ್ತು ದಿನಸು ವಸ್ತುಗಳ ಕಿಟ್ ನೀಡಿದರು.
ಜೀತೇಶ್ ಇವರು ಈಗಾಗಲೇ 250ಕಿಂತ ಹೆಚ್ಚು ಕಿಟ್ ವಿತರಣೆಗೆ ಮಾಡಿದ್ದು, ತಾವೇ ಸ್ವತಃ ಸಂಕಷ್ಟ ಹೊಂದಿದವರನ್ನು ಗುರುತಿಸಿ ಕಿಟ್ ಗಳನ್ನು ಅವರ ಮನೆಗೆ ತಲುಪಿಸುವ ಕಾರ್ಯ ಮಾಡಿದ್ದು ,ಆಶಾ ಕಾರ್ಯಕರ್ತೆಯರಿಗೂ ಕಿಟ್ ವಿತರಿಸಿದ್ದರು . ಉಚ್ಚಿಲ ಬಬ್ಬು ಸ್ವಾಮಿ ದೈವಸ್ಥಾನದ ಮುಖ್ಯಸ್ಥರಾದ ಜಗನ್ನಾಥ ಮೇಸ್ತ್ರಿ,ಉಚ್ಚಿಲ ಅಯ್ಯಪ್ಪ ಸ್ವಾಮಿ ಭಕ್ತ ವೃಂದದ ಗುರುಸ್ವಾಮಿ ಅಶೋಕ್ ಕರ್ಕೇರ, ಲವ ಶೆಟ್ಟಿ, , ಕೃಷ್ಣ ಕುಮಾರ್ ಪೊಲ್ಯ, ಉಪಸ್ಥಿತರಿದ್ದರು.
