ಜಿಲ್ಲೆಯಲ್ಲಿ ಮರಳುಗಾರಿಕೆ ಶೀಘ್ರ ಪ್ರಾರಂಭ : ಸಚಿವ ಕೋಟ ಶ್ರೀನಿವಾಸ ಪೂಜಾರಿ -Vishwanews24
ಉಡುಪಿ : : ಜಿಲ್ಲೆಯಲ್ಲಿ ಮರಳುಗಾರಿಕೆ ಪ್ರಾರಂಭಿಸಲು ಜಿಲ್ಲಾಡಳಿತ ಮಟ್ಟದಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಆಡಳಿತಾತ್ಮಕ ಸಮಸ್ಯೆ ನಿವಾರಿಸಿ ಶೀಘ್ರ ಮರಳು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಮತ್ತು ಬಂದರು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮೀನುಗಾರಿಕೆ ಇಲಾಖೆ ಜತೆಗೆ ಬಂದರು ಇಲಾಖೆ ಒಟ್ಟಾಗಿ ಇರಬೇಕು ಎಂಬ ಬೇಡಿಕೆ ಈಡೇರಿದೆ. ಇದರಿಂದ ಜೆಟ್ಟಿ ನಿರ್ಮಾಣ, ಮೀನುಗಾರ ಸಮಸ್ಯೆ ನಿವಾರಣೆಗೆ ಅನುಕೂಲವಾಗುತ್ತದೆ. 309 ಕಡಲ ತೀರ ಸಂರಕ್ಷಣೆಗೆ ಆದ್ಯತೆ ನೀಡಲಾಗುವುದು. ಅಸಂಘಟಿತ ವಲಯ ಕಾರ್ಮಿಕರ ಪಟ್ಟಿಯಲ್ಲಿ ಮೀನುಗಾರರನ್ನು ಸೇರಿಸಲು ಸಭೆ ನಡೆಸಲಾಗಿದೆ ಎಂದರು.
ಸುವರ್ಣ ತ್ರಿಭುಜ ಬೋಟ್ ಅವಘಡ ಪ್ರಕರಣಕ್ಕೆ ಸಂಬಂಧಿಸಿ ಸಾಲ ಮರುಪಾವತಿಗೆ ವಿಮೆ ಮೊತ್ತ ಕಡಿತದ ಬಳಿಕವೂ ಸುಮಾರು 25 ಲಕ್ಷ ರೂ. ಅವಶ್ಯವಿದೆ. ಇದನ್ನು ಸರ್ಕಾರದಿಂದ ಪಾವತಿಸಲು ಸಿಎಂ ಆದೇಶ ನೀಡಿದ್ದಾರೆ. ನಾಪತ್ತೆಯಾದ ಮೀನುಗಾರರಿಗೆ ಕೇಂದ್ರ ಸರ್ಕಾರದಿಂದ ಗರಿಷ್ಠ ಮೊತ್ತದ ಪರಿಹಾರ ನೀಡಲು ಬುಧವಾರ ರಾಜ್ಯ ಸರ್ಕಾರದಿಂದ ಪತ್ರ ಕಳುಹಿಸಲಾಗಿದೆ. ಮುಂದೆ ಇಂತಹ ಘಟನೆ ಆಗದಂತೆ ಇಸ್ರೋ ನೆರವಿನಿಂದ ಸಂಪರ್ಕ ಸಾಧನ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ವಾಸುದೇವ ಭಟ್ ಪೆರಂಪಳ್ಳಿ ನೇತೃತ್ವದಲ್ಲಿ ಪೂಜಾ ವಿಧಿವಿಧಾನ ನಡೆಯಿತು. ಅರ್ಚಕ ನವೀನ್ ಶಿವತ್ತಾಯ, ಆಡಳಿತ ಮಂಡಳಿ ಸದಸ್ಯ ಕೃಷ್ಣಮೂರ್ತಿ ಶಿವತ್ತಾಯ, ಇಂಜಿನಿಯರ್ ರಮೇಶ್ ರಾವ್, ನಗರಸಭಾ ಸದಸ್ಯರಾದ ಮಂಜುಳಾ ನಾಯಕ್, ಮಂಜುನಾಥ ಶೆಟ್ಟಿಗಾರ್, ಬಾಲಕೃಷ್ಣ ಶೆಟ್ಟಿ, ಚಂದ್ರಶೇಖರ್, ಜಯಂತಿ ಪೂಜಾರಿ, ಗಿರೀಶ್ ಅಂಚನ್, ಗಿರಿಧರ್ ಕರಂಬಳ್ಳಿ, ನಗರಸಭೆ ಮಾಜಿ ಅಧ್ಯಕ್ಷ ಹೆರ್ಗ ದಿನಕರ ಶೆಟ್ಟಿ, ಹರಿಕೃಷ್ಣ ಶಿವತ್ತಾಯ, ಸತೀಶ್ ಕುಮಾರ್, ಶ್ರೀನಿವಾಸ ಬಲ್ಲಾಳ್ ಮತ್ತಿತರರಿದ್ದರು.
