ಯಂಗ್ ಫ್ರೆಂಡ್ಸ್ ಟೀಂ ಕೊರಂಗ್ರಪಾಡಿ ಉಡುಪಿ ತಂಡದ ಜೊತೆ ರಕ್ಷಿತ್ ಶೆಟ್ಟಿ ‘ ಪಿಲಿ ನಲಿಕೆ ‘ ವಿಡಿಯೋ -Vishwanews24
ಉಡುಪಿ : ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ಹುಲಿ ನೃತ್ಯಕ್ಕೆ ಸ್ಟೆಪ್ ಹಾಕಿ ಸಕತ್ ಎಂಜಾಯ್ ಮಾಡಿದ್ದಾರೆ. ಅಷ್ಟಮಿಯ ಸಂದರ್ಭದಲ್ಲಿ ಜೂನಿಯರ್ ಫ್ರೆಂಡ್ಸ್ ಕೊರಂಗ್ರಪಾಡಿ ಉಡುಪಿ ತಂಡದ ಜೊತೆ ರಕ್ಷಿತ್ ‘ ಪಿಲಿ ನಲಿಕೆ’ ಮಾಡಿದರು.
ಇಂದು ಉಡುಪಿ ಕೊರಂಗ್ರಪಾಡಿಯ ಯಂಗ್ ಫ್ರೆಂಡ್ಸ್ ಟೀಂ ಜೊತೆ ರಕ್ಷಿತ್ ಸಿಕ್ಕಾಪಟ್ಟೆ ಹುಲಿ ನೃತ್ಯ ಮಾಡಿದ್ದಾರೆ. ರಕ್ಷಿತ್ ಇದ್ದಾರೆ ಎಂದ ತಕ್ಷಣ ಸುತ್ತಮುತ್ತಲಿನ ನೂರಾರು ಯುವಕ ಯುವತಿಯರು ಕೊರಂಗ್ರಪಾಡಿಗೆ ಭೇಟಿ ಕೊಟ್ಟಿದ್ದಾರೆ. ಜನ ಬರುತ್ತಿದ್ದಂತೆ ರಕ್ಷಿತ್ ಮತ್ತೆ ಮತ್ತೆ ಕುಣಿದಿದ್ದಾರೆ.

ಜಾಹಿರಾತು
ಕೊಲ್ಲೂರಿನಲ್ಲಿ ಕುಟುಂಬ ಮಾಡಿಸಿದ್ದ ಚಂಡಿಕಾ ಹೋಮಕ್ಕೆ ಬಂದಿದ್ದ ರಕ್ಷಿತ್ ಮನೆಯಲ್ಲೇ ಉಳಿದುಕೊಂಡು ಕೃಷ್ಣ ಜನ್ಮಾಷ್ಟಮಿಯಲ್ಲಿ ಪಾಲ್ಗೊಂಡಿದ್ದಾರೆ. ಪಕ್ಕಾ ಪ್ರೊಫೆಷನಲ್ಸ್ ಥರ ಕುಣಿಯುವ ರಕ್ಷಿತ್ ಶೆಟ್ಟಿ, ಹುಲಿವೇಷ ಕುಣಿತದ ಹಿನ್ನೆಲೆಯಲ್ಲಿ ಸಂಗೀತಕ್ಕೊಂದು ಹೊಸ ಟಚ್ ಕೊಟ್ಟಿದ್ದಾರೆ. ಆ ಮ್ಯೂಸಿಕ್ಗೂ ಉಡುಪಿಯಲ್ಲಿ ಕುಣಿದಿದ್ದಾರೆ.
