ಜೆಡಿಎಸ್ ತೊರೆದು ಬಿಜೆಪಿ ಸೇರಲಿರುವ ಎಂಎಲ್ ಸಿ ಸಂದೇಶ ನಾಗರಾಜ್ -Vishwanews24

Featured, ರಾಜ್ಯ ನ್ಯೂಸ್

ಜೆಡಿಎಸ್  ತೊರೆದು ಬಿಜೆಪಿ ಸೇರಲಿರುವ ಎಂಎಲ್ ಸಿ ಸಂದೇಶ ನಾಗರಾಜ್ -Vishwanews24

ಬೆಂಗಳೂರು : ಜಾತ್ಯಾತೀತ ಜನತಾ ದಳವನ್ನು ಒಬ್ಬೊಬ್ಬರೇ ತೊರೆಯುತ್ತಿದ್ದು, ವಿಧಾನ ಪರಿಷತ್ ಸದಸ್ಯ, ಚಲನಚಿತ್ರ ನಿರ್ಮಾಪಕ ಸಂದೇಶ್ ನಾಗರಾಜ್ ಪಕ್ಷ ತೊರೆದು ಬಿಜೆಪಿ ಸೇರುವುದಾಗಿ ಗುರುವಾರ ಘೋಷಿಸಿದ್ದಾರೆ.

ಬಿಜೆಪಿ ಕಚೇರಿಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂದೇಶ್ ನಾಗರಾಜ್ , ಜನವರಿ 5 ರ ವರೆಗೆ ನಾನು ಜೆಡಿಎಸ್ ನಲ್ಲಿ ಉಳಿಯುತ್ತೇನೆ, ಆ ಬಳಿಕ ಬಿಜೆಪಿ ಸೇರುತ್ತೇನೆ. ಮೂರನೇ ಬಾರಿ ಚಾಮರಾಜನಗರ-  ಮೈಸೂರು ಸ್ಥಳೀಯ ಸಂಸ್ಥೆಗಳಿಂದ ಸ್ಪರ್ಧಿಸುವುದಾಗಿ ತಿಳಿಸಿದರು.

ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಸಚಿವ ಭೈರತಿ ಬಸವರಾಜು ಮತ್ತು ಪರಿಷತ್ ಸದಸ್ಯ ಪುಟ್ಟಣ್ಣ ಅವರು ಉಪಸ್ಥಿತರಿದ್ದರು..