ಜೇಸಿಐ ಕಾಪು ಹಾಗೂ ಇತರ ಸಂಘಸಂಸ್ಥೆಗಳ ಸಹಯೋಗದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟನೆ.-Vishwanews24

Featured, ಉಡುಪಿ

ಜೇಸಿಐ ಕಾಪು ಹಾಗೂ ಇತರ ಸಂಘಸಂಸ್ಥೆಗಳ ಸಹಯೋಗದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟನೆ.

ಕಾಪು: ಜೇಸಿಐ ಕಾಪು,ಕಾಪು ಗೂಡ್ಸ್ ಟೆಂಪೋ ಚಾಲಕರ ಮಾಲಕರ ಸಂಘ, ರಕ್ತ ನಿಧಿ ವಿಭಾಗ, ಉಡುಪಿ ಜಿಲ್ಲಾ ಆಸ್ಪತ್ರೆ ಸಮುದಾಯ ಆರೋಗ್ಯ ಕೇಂದ್ರ, ಶಿರ್ವ ಪ್ರಾಥಮಿಕ ಆರೋಗ್ಯ ಕೇಂದ್ರ, ಕಾಪು ಯುವವಾಹಿನಿ (ರಿ.) ಕಾಪು ಘಟಕ, ಸತ್ಯದ ತುಳುವೆರ್ (ರಿ) ಉಡುಪಿ – ಮಂಗಳೂರು ಹಿಯಾ ಮೆಡಿಕಲ್ಸ್, ಕಾಪ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಾಗೂ ಉಚಿತರಕ್ತದೊತ್ತಡ ಮತ್ತು ಮಧುಮೇಹ ತಪಾಸಣಾ ಶಿಬಿರ ಕಾರ್ಯಕ್ರಮ ವೀರಭದ್ರ ಸಭಾಭವನ, ಕಾಪುವಿನಲ್ಲಿ ನಡೆಯಿತು.
ಕಾಪು ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇದೇ ಸಂಧರ್ಭದಲ್ಲಿ 50ಕ್ಕೂ ಅಧಿಕ ಬಾರಿ ರಕ್ತದಾನ ಮಾಡಿದ ಪ್ರವೀಣ್ ಬಂಗೇರ ಇವರಿಗೆ ಸಾಧಕರತ್ನ ಎಂಬ ಗೌರವದೊಂದಿಗೆ ಪುರಸ್ಕಾರಿಸಲಾಯಿತು.
ವೇದಿಕೆಯಲ್ಲಿ ಶ್ರೀಮತಿ ಗೀತಾಂಜಲಿ ಸುವರ್ಣ, ಗೌರವಾಧ್ಯಕ್ಷರು, ಸತ್ಯದ ತುಳುವೆರು (ರಿ.) ಉಡುಪಿ -ಮಂಗಳೂರು,ಡಾ| ವೀಣಾ ಕುಮಾರಿ, ವೈದ್ಯಾಧಿಕಾರಿ, ರಕ್ತ ನಿಧಿ ವಿಭಾಗ, ಜಿಲ್ಲಾ ಆಸ್ಪತ್ರೆ , ಉಡುಪಿ
ಶೀ ವಿನಯ ಬಲ್ಲಾಳ್, ಗೌರವಾಧ್ಯಕ್ಷರು, ಕಾಪು ಗೂಡ್ಸ್ ಟೆಂಪೊ ಮಾಲಕರ ಮತ್ತು ಚಾಲಕರ ಸಂಘ ,ಜೇಸಿ ಹರೀಶ್ ಕುಲಾಲ್, ವಲಯ ಸಂಯೋಜಕರು, ರಕ್ತದಾನ ವಿಭಾಗ, ವಲಯ XV,ಹೀಯಾ ಮೆಡಿಕಲ್ಸ್ ಮಾಲಕರಾದ ಯೋಗಿಶ್ ರೈ, ಶೇಖ್ ನಜೀರ್ ಅಧ್ಯಕ್ಷರುಕಾಪು ಗೂಡ್ ಟೆಂಪೊ ಮಾಲಕರ ಮತ್ತು ಚಾಲಕರ ಸಂಘ,ಸೌಮ್ಯ ರಾಕೇಶ್ ಅಧ್ಯಕ್ಷರು ಯುವವಾಹಿನಿ(ರಿ.) ಕಾಪು ಘಟಕ,ಕಾಪು ಪೊಲೀಸ್ ಠಾಣೆಯ ಎಎಸೈ ರಾಜೇಂದ್ರ ಮನಿಯಾಣಿ ಹಾಗೂ ಕಾಪು ಜೆಸಿಐ ನ ವಿವಿಧ ಪದಾಾಾಧಿಕಾರಿಗಳು,ಉಪಸ್ಥಿತರಿದ್ದರು. ಕಾಪು ಜೇಸಿಐ ಅಧ್ಯಕ್ಷೆ ಅರುಣಾ ಐತಾಳ್ ಸ್ವಾಗತಿಸಿದರು, ನೀಲಾನಂದ ನಾಯ್ಕ್ ನಿರೂಪಿಸಿದರು.


ವರದಿ: ಪುರುಷೋತ್ತಮ ಸಾಲಿಯಾನ್ ಮೂಳೂರು- ವಿಶ್ವನ್ಯೂಸ್24