ಜೈಲಿನಲ್ಲಿ ಮೊಬೈಲ್ ಬಳಕೆ ಆರೋಪ : 2 ದಿನ ಪೊಲೀಸ್ ಕಸ್ಟಡಿಗೆ ಪ್ರಜ್ವಲ್ ರೇವಣ್ಣ – vishwanews24
ಜೈಲಿನಲ್ಲಿ ಮೊಬೈಲ್ ಬಳಕೆ ಆರೋಪ : 2 ದಿನ ಪೊಲೀಸ್ ಕಸ್ಟಡಿಗೆ ಪ್ರಜ್ವಲ್ ರೇವಣ್ಣ
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಇಂದು ಪ್ರಜ್ವಲ್‌ನನ್ನು 42ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಪಡೆಯಲು ಪೊಲೀಸರು ಕೋರ್ಟ್‌ನಲ್ಲಿ ಮನವಿ ಮಾಡಿದರು.
ಇದನ್ನೂ ಓದಿ:
ಮಕ್ಕಳ ಕೈಯಲ್ಲಿ ಕೆಲಸ ಮಾಡಿಸಿದ್ರೆ ತಕ್ಷಣ ಅರೆಸ್ಟ್ ಮಾಡಿ : ಅಧಿಕಾರಿಗಳಿಗೆ ಸಿಎಂ ಖಡಕ್ ಆದೇಶ – vishwanews24
ಈ ಪ್ರಕರಣದಲ್ಲಿ ಪ್ರತಾಪ್ ಎ1 ಆರೋಪಿ ಹಾಗೂ ಪ್ರಜ್ವಲ್ ರೇವಣ್ಣ ಎ2 ಆರೋಪಿಯಾಗಿದ್ದು, ತನಿಖೆಗೆ ಅಗತ್ಯವಿರುವ ಹಿನ್ನೆಲೆಯಲ್ಲಿ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಹಾಗೂ ಪ್ರತಾಪ್ ಅವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲು ಅನುಮತಿ ನೀಡಬೇಕೆಂದು ಕೋರಿದ್ದರು. ಇದೀಗ ಕೋರ್ಟ್ ಪೊಲೀಸ್ ಅರ್ಜಿಯನ್ನು ಪರಿಗಣಿಸಿ 2 ದಿನ ಪೊಲೀಸ್ ಕಸ್ಟಡಿಗೆ ಆದೇಶ ನೀಡಿದೆ.
ಇದನ್ನೂ ಓದಿ:
ಉಡುಪಿ: ನವಜಾತ ಶಿಶು ಸಾವನ್ನಪ್ಪಿದ ಪ್ರಕರಣ ; ಕಠಿಣ ಕ್ರಮಕ್ಕೆ ಆಗ್ರಹ – vishwanews24
ಜೈಲಿನಲ್ಲಿ ಪ್ರಜ್ವಲ್ ಬಳಿ ಮೊಬೈಲ್, ಪೆನ್ ಡ್ರೈವ್, ನೋಟ್ ಬುಕ್ ಪತ್ತೆ ಯಾಗಿತ್ತು. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಶಪಡಿಸಿಕೊಂಡ ಮೊಬೈಲ್, ಪೆನ್ ಡ್ರೈವ್‌ಗಳನ್ನು ಪೊಲೀಸರು ರಿಟ್ರೀವ್ ಗೆ ಕಳುಹಿಸಿದ್ದರು
