ಟರ್ಕಿ ಭೂಕಂಪದಲ್ಲಿ ಕನ್ನಡಿಗರು ಸಿಲುಕಿದ್ರೆ ಮಾಹಿತಿ ನೀಡಿ :  ಸಿಎಂ – Vishwanews24

Featured, ರಾಜ್ಯ ನ್ಯೂಸ್

ಟರ್ಕಿ ಭೂಕಂಪದಲ್ಲಿ ಕನ್ನಡಿಗರು ಸಿಲುಕಿದ್ರೆ ಮಾಹಿತಿ ನೀಡಿ :  ಸಿಎಂ

ಬೆಂಗಳೂರು: ಟರ್ಕಿ ಭೂಕಂಪದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರನ್ನು ರಕ್ಷಿಸುವುದಕ್ಕೆ ವಿದೇಶಾಂಗ ಇಲಾಖೆ ಜತೆಗೆ ನಿರಂತರ ಸಂಪರ್ಕ ಮಾಡಲಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿ, ವಿದೇಶಾಂಗ ಇಲಾಖೆ ವಿಶೇಷ ಹೆಲ್ಪ್‌ಲೈನ್‌ ಪ್ರಾರಂಭಿಸುತ್ತಿದ್ದು, ಆ ಮೂಲಕ ಕನ್ನಡಿಗರ ಮಾಹಿತಿ ಪಡೆದುಕೊಳ್ಳಲಾಗುವುದು. ಜತೆಗೆ ಟರ್ಕಿ ರಾಯಭಾರ ಕಚೇರಿ ಜತೆಗೂ ನಮ್ಮ ಅಧಿಕಾರಿಗಳು ಸಂಪರ್ಕ ಪಡೆದು ಅಲ್ಲಿ ಕನ್ನಡಿಗರು ಯಾರೆಲ್ಲ ಇದ್ದಾರೆಂದು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಸರ್ಕಾರ ಈ ಸಂಬಂಧ ಹೆಲ್ಪ್‌ಲೈನ್‌ ಪ್ರಾರಂಭಿಸಲಿದ್ದು, ಜನರು ತಮ್ಮ ಬಂಧು-ಬಳಗದವರು ಯಾರಿದ್ದಾರೆ ಎಂಬ ಬಗ್ಗೆ ಮಾಹಿತಿ ಹಂಚಿಕೊಂಡರೆ ಅವರನ್ನೆಲ್ಲ ಸ್ವದೇಶಕ್ಕೆ ಕರೆತರಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಮುಂಬೈ  : ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ : ಪೊಲೀಸರಿಂದ ಭದ್ರತೆ ಹೆಚ್ಚಳ – Vishwanews24

Leave a Reply