ಟಿವಿಎಸ್ ಲೂನಾಗೆ ಗುದ್ದಿದ ಟೂರಿಸ್ಟ್ ಟೆಂಪೋ -ಲೂನಾ ಚಾಲಕನಿಗೆ ಗಾಯ- ಕಾಪು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದ ಘಟನೆ

Featured, ಉಡುಪಿ

ಕಾಪು ರಾಷ್ಟ್ರೀಯ ಹೆದ್ದಾರಿ 66 ವಿದ್ಯಾನಿಕೇತನ ಶಾಲೆಯ ಬಳಿ ನಿಯಂತ್ರಣ ತಪ್ಪಿ ಟೂರಿಸ್ಟ್ ಟೆಂಪೋ‌ಟ್ರಾವೆಲರ್ ಟಿವಿಎಸ್ ಲೂನಾ ಡಿಕ್ಕಿ ಹೊಡೆದು ಲೂನಾ ಚಾಲಕ‌ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.

ಕೇರಳ ‌ಕಡೆಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಲೂನಾಗೆ ಕೇರಳದಿಂದ ಕೊಲ್ಲೂರು ಕಡೆ ಸಾಗುತ್ತಿದ್ದ ಟೂರಿಸ್ಟ್ ಟೆಂಪೋ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದು ಕಂದಕಕ್ಕೆ ವಾಲಿ ನಿಂತಿದೆ.

ಘಟನಾ ಸ್ಥಳಕ್ಕೆ ಕಾಪು ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.