ಟೆನ್ನಿಸ್ ಜಗತ್ತಿಗೆ ನಿವೃತ್ತಿ ಘೋಷಿಸಿದ ಸಾನಿಯಾ ಮಿರ್ಜಾ – Vishwanews24
ಟೆನ್ನಿಸ್ ಜಗತ್ತಿಗೆ ನಿವೃತ್ತಿ ಘೋಷಿಸಿದ ಸಾನಿಯಾ ಮಿರ್ಜಾ
ದುಬೈ ಡ್ಯೂಟಿ ಫ್ರೀ ಟೆನಿಸ್ ಚಾಂಪಿಯನ್ ಶಿಪ್ ಪಂದ್ಯಾವಳಿಯ ನಂತರ ಟೆನಿಸ್ ಗೆ ವಿದಾಯ
ನವದೆಹಲಿ: ದುಬೈ ಡ್ಯೂಟಿ ಫ್ರೀ ಟೆನಿಸ್ ಚಾಂಪಿಯನ್ ಶಿಪ್ ಪಂದ್ಯಾವಳಿಯ ನಂತರ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ವೃತ್ತಿಪರ ಟೆನಿಸ್ ಗೆ ವಿದಾಯ ಹೇಳಲಿದ್ದಾರೆ ಎನ್ನಲಾಗಿದೆ. ಅಂದ ಹಾಗೇ ದುಬೈ ಡ್ಯೂಟಿ ಚಾಂಪಿಯನ್ ಶಿಪ್ ಟೂರ್ನಮೆಂಟ್ ಮುಂದಿನ ತಿಂಗಳು ನಡೆಯಲಿದೆ.
ಈ ಹಿಂದೆ ಸಾನಿಯಾ ಮಿರ್ಜಾ ಕಳೆದ ವರ್ಷ ಯುಎಸ್ ಓಪನ್ ನಂತರ ವೃತ್ತಿಪರ ಟೆನಿಸ್ಗೆ ವಿದಾಯ ಹೇಳಲು ನಿರ್ಧರಿಸಿದರು, ಆದರೆ ಗಾಯದಿಂದಾಗಿ, ಅವರು ಪಂದ್ಯಾವಳಿಯಲ್ಲಿ ಆಡಲು ಸಾಧ್ಯವಾಗಲಿಲ್ಲ.
ಸಾನಿಯಾ ಮಿರ್ಜಾ ಕಳೆದ 10 ವರ್ಷಗಳಿಂದ ದುಬೈನಲ್ಲಿ ವಾಸಿಸುತ್ತಿದ್ದಾರೆ. ಸಾನಿಯಾ ಮಿರ್ಜಾ ದುಬೈನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಮೂಲಕ ಸಾನಿಯಾ ಮಿರ್ಜಾ ತಮ್ಮ ಅಭಿಮಾನಿಗಳಲ್ಲಿ ಟೆನಿಸ್ ವೃತ್ತಿಜೀವನಕ್ಕೆ ವಿದಾಯ ಹೇಳಲಿದ್ದಾರೆ
36 ವರ್ಷ ವಯಸ್ಸಿನ ಸಾನಿಯಾ ಮಿರ್ಜಾ ಡಬಲ್ಸ್ನಲ್ಲಿ ವಿಶ್ವದ ನಂಬರ್-1 ಆಗಿದ್ದಾರೆ. 2022ರ ಅಂತ್ಯದಲ್ಲಿ ನಿವೃತ್ತಿ ಹೊಂದುವುದಾಗಿ ಸಾನಿಯಾ ಕಳೆದ ವರ್ಷವೇ ಘೋಷಿಸಿದ್ದರು. ಇದೀಗ ಸಾನಿಯಾ ಮಿರ್ಜಾ ಈ ವರ್ಷದ ಮೊದಲ ಗ್ರ್ಯಾನ್ ಸ್ಲಾಮ್ ಆಸ್ಟ್ರೇಲಿಯನ್ ಓಪನ್ ಆಡಲಿದ್ದಾರೆ. ಇದಾದ ಬಳಿಕ ಯುಎಇಯಲ್ಲಿ ಚಾಂಪಿಯನ್ ಶಿಪ್ ಆಡಿದ ಬಳಿಕ ಟೆನಿಸ್ ಗೆ ವಿದಾಯ ಹೇಳಲಿದ್ದಾರೆ.
