ಟೈಮಿಂಗ್‌ ವಿವಾದ: ಕಾಪು ಸರ್ವಿಸ್ ರಸ್ತೆಯಲ್ಲಿ ಮತ್ತೆ ಖಾಸಗಿ ಎಕ್ಸ್‌ಪ್ರೆಸ್ ಬಸ್‌ ಚಾಲಕರ ವಾಗ್ವಾದ – vishwanews24

Featured, ಉಡುಪಿ

ಟೈಮಿಂಗ್‌ ವಿವಾದ: ಕಾಪು ಪೇಟೆಯಲ್ಲಿ ಮತ್ತೆ ಖಾಸಗಿ ಎಕ್ಸ್‌ಪ್ರೆಸ್ ಬಸ್‌ ಚಾಲಕರ ವಾಗ್ವಾದ ; ಸ್ಥಳೀಯರಲ್ಲಿ ಆತಂಕ

ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಕಾಪು ಸರ್ವಿಸ್ ರಸ್ತೆಯಲ್ಲಿ ಎಕ್ಸ್ ಪ್ರೆಸ್ ಬಸ್ ಚಾಲಕರ ರಂಪಾಟ ಮತ್ತೆ ಮುಂದುವರೆದಿದೆ.

ಸೋಮವಾರ (ಆ.10) ಬೆಳಗ್ಗೆ ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಎರಡು ಎಕ್ಸ್ ಪ್ರೆಸ್ ಬಸ್‌ಗಳ ಚಾಲಕರು ಬಸ್‌ಗಳನ್ನು ರಸ್ತೆಯಲ್ಲಿ ನಿಲ್ಲಿಸಿ ಪರಸ್ಪರ ವಾಗ್ವಾದ ನಡೆಸಿ ಸ್ಥಳೀಯರಲ್ಲಿ ಆತಂಕದ ವಾತಾವರಣ ಮೂಡಿಸಿದ್ದಾರೆ.

ಟೈಮಿಂಗ್ ವಿಚಾರದಲ್ಲಿ ಬಸ್ ಚಾಲಕರು ಮತ್ತು ನಿರ್ವಾಹಕರು ಬಸ್‌ನೊಳಗೆ ಜಗಳ ಮಾಡಿದ್ದು, ಬಳಿಕ ಬಸ್‌ನಿಂದ ಕೆಳಗಿಳಿದು ಪ್ರಯಾಣಿಕರ ಎದುರಲ್ಲೇ ವಾಗ್ವಾದ ಮುಂದುವರಿಸಿದ್ದಾರೆ.

ಉಡುಪಿ: ‘ಭಗವತಿ ಟೂರಿಸ್ಟ್’ ಟ್ರಾವೆಲ್ ಬುಕ್ಕಿಂಗ್ ಸಂಸ್ಥೆಯ ಮಾಲೀಕ ವಿನಯ್ ರಾಜ್ ವಿಧಿವಶ – vishwanews24

 

ಸ್ಥಳೀಯರು ಮತ್ತು ರಿಕ್ಷಾ ಚಾಲಕರು ಅವರನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದರಾದರು ಸುಮಾರು 10 ನಿಮಿಷಗಳ ಕಾಲ ತಮ್ಮ ವಾಗ್ವಾದವನ್ನು ಮುಂದುವರಿಸಿದ್ದಾರೆ.

ಕಾಪು ಸರ್ವಿಸ್ ಬಸ್ ನಿಲ್ದಾಣದಲ್ಲಿ ಎಕ್ಸ್‌ಪ್ರೆಸ್ ಚಾಲಕರ ಈ ರೀತಿ ವರ್ತನೆ ನಿರಂತರವಾಗಿ ನಡೆಯುತ್ತಿದ್ದು, ಎರಡು ವಾರದ ಹಿಂದೆ ಇಂತಹ ಘಟನೆ ನಡೆದಾಗ ಪೊಲೀಸರು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡಿದ್ದರು.

ಇದೀಗ ಮತ್ತೆ ಎರಡು ಬಸ್ ಚಾಲಕರು ಇದೇ ರೀತಿಯ ವರ್ತನೆಯನ್ನು ಮುಂದುವರಿಸಿದ್ದು ಅವರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಸ್ಥಳೀಯರು ಮತ್ತು ಬಸ್ ಪ್ರಯಾಣಿಕರು ಆಗ್ರಹಿಸಿದ್ದಾರೆ.

ಉಚ್ಚಿಲ ದಸರಾ 2026: ಅದ್ಧೂರಿ ಆಚರಣೆಗೆ ಸಿದ್ಧತೆ – vishwanews24

Leave a Reply