ಡಗ್ಸ್‌ ಪ್ರಕರಣ : 22 ದಿನಗಳ ಬಳಿಕ ಆರ್ಯನ್‌ ಖಾನ್‌ ಜೈಲಿನಿಂದ ಬಿಡುಗಡೆ – Vishwanews24

Featured, ರಾಷ್ಟ್ರ ನ್ಯೂಸ್

ಡಗ್ಸ್‌ ಪ್ರಕರಣ: 22 ದಿನಗಳ ಬಳಿಕ ಜೈಲಿನಿಂದ ಆರ್ಯನ್‌ ಖಾನ್‌ ಬಿಡುಗಡೆ – Vishwanews24

ಮುಂಬೈ: ಬಾಲಿವುಡ್‌ ಸೂಪರ್‌ ಸ್ಟಾರ್‌ ಶಾರುಕ್‌ ಖಾನ್‌ ಮಗ, ಐಷಾರಾಮಿ ಹಡಗಿನ ಡ್ರಗ್ಸ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆರ್ಯನ್‌ ಖಾನ್‌ 22 ದಿನಗಳ ನಂತರ ಇಲ್ಲಿನ ಆರ್ಥರ್‌ ರೋಡ್‌ ಜೈಲಿನಿಂದ ಬಿಡುಗಡೆಯಾದರು.

ಸೆಷನ್ಸ್‌ ನ್ಯಾಯಾಲಯವು ಬಿಡುಗಡೆ ಮೆಮೊ ನೀಡಿದ ಒಂದು ದಿನದ ನಂತರ, ಅಂದರೆ ಶನಿವಾರ 11 ಗಂಟೆ ಸುಮಾರಿಗೆ ಆರ್ಯನ್‌ ಜೈಲಿನಿಂದ ಹೊರಬಂದರು.

ಅಲ್ಲಿಂದ ಕಾರಿನ ಮೂಲಕ ಅವರು ಬಾಂದ್ರಾದಲ್ಲಿರುವ ತಮ್ಮ ಮನೆಗೆ ಸಾಗಿದರು.

ಅವರಿಗೆ ಬಾಂಬೆ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿತ್ತು. ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಲು ಸಮಯ ಹಿಡಿದಿದ್ದರಿಂದ ಬಿಡುಗಡೆ ವಿಳಂಬವಾಯಿತು. ಶಾರುಕ್‌ ಕುಟುಂಬದ ಸ್ನೇಹಿತೆ ಮತ್ತು ನಟಿ ಜೂಹಿ ಚಾವ್ಲಾ ಅವರು ಆರ್ಯನ್‌ ಜಾಮೀನಿಗೆ ಭದ್ರತೆ ಒದಗಿಸಿದ್ದಾರೆ.

5-11 ವರ್ಷ ವಯಸ್ಸಿನ ಮಕ್ಕಳಿಗೆ ಫಿಜರ್‌ ಕೊರೊನಾ ಲಸಿಕೆ ನೀಡಲು ಅನುಮತಿ ನೀಡಿದ ಎಫ್‌ಡಿಎ – VIshwanews24