ಡಿ.6ರಂದು ಹಾಸನಕ್ಕೆ ಸಿಎಂ, ಡಿಸಿಎಂ ಆಗಮನ : ₹300 ಕೋಟಿ ಮೌಲ್ಯದ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ – vishwanews24
ಡಿ.6ರಂದು ಹಾಸನಕ್ಕೆ ಸಿಎಂ, ಡಿಸಿಎಂ ಆಗಮನ : ₹300 ಕೋಟಿ ಮೌಲ್ಯದ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ
ಹಾಸನ: ರಾಜ್ಯ ಸಚಿವ ಸಂಪುಟ ಪುನರ್ರಚನೆ, ಸಿಎಂ ಬದಲಾವಣೆ ಚರ್ಚೆಯ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.6ರಂದು ಹಾಸನ ನಗರಕ್ಕೆ ಆಗಮಿಸಲಿದ್ದು, ನಾನಾ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ, ಸರಕಾರಿ ಸವಲತ್ತು ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಸರ್ಕಾರಿ ಕಾರ್ಯಕ್ರಮವಾಗಿದ್ದು, ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶ ಎಂದು ಹೆಸರಿಡಲಾಗಿದೆ. ಈ ಸಮಾವೇಶದ ಮೂಲಕ ಸರ್ಕಾರಿ ಸವಲತ್ತುಗಳನ್ನು ಫಲಾನುಭವಿಗಳಿಗೆ ಮುಟ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ. ಸಮಾವೇಶದಲ್ಲಿ 70 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 27.93 ಕೋಟಿ ರೂ. ಅನುದಾನ: ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷಗಳ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ನಯಾ ಪೈಸೆ ಅನುದಾನ ನೀಡಿಲ್ಲ ಎಂಬ ಜಿಲ್ಲೆಯ ಜೆಡಿಎಸ್, ಬಿಜೆಪಿ ಶಾಸಕರ ಆರೋಪದ ನಡುವೆ, ನಗರದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಾನಾ ವಿಭಾಗಗಳನ್ನು ಪ್ರಾರಂಭಿಸಲು ಸರ್ಕಾರ 27.93 ಕೋಟಿ ರೂ. ಅನುದಾನ ನೀಡಿದೆ. ಕಾರ್ಡಿಯಾಲಜಿ, ನ್ಯೂರಾಲಜಿ, ನ್ಯೂರೋಸರ್ಜರಿ, ಯುರಾಲಜಿ ಮತ್ತು ಕಾರ್ಡಿಯಾ ಥೊರಾಸಿಕ್ ಸರ್ಜರಿ ವಿಭಾಗಗಳಿಗೆ ಅವಶ್ಯಕವಿರುವ ಉಪಕರಣ ಮತ್ತು ಪೀಠೋಪಕರಣಗಳನ್ನು ಒದಗಿಸಲು ಸಿದ್ಧತೆ ನಡೆದಿದೆ.
70 ಸಾವಿರ ಫಲಾನುಭವಿಗಳು ಭಾಗಿ: ಸರ್ಕಾರಿ ಸೇವೆಗಳ ಸಮರ್ಪಣಾ ಸಮಾವೇಶ ಕಾರ್ಯಕ್ರಮಕ್ಕೆ ಡಿ.6ರಂದು ಹಾಸನ ನಗರಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸಲಿದ್ದು, ಜಿಲ್ಲಾಧಿಕಾರಿ ಲತಾಕುಮಾರಿ ಸ್ಥಳ ಪರಿಶೀಲನೆ ನಡೆಸಿದರು.
12 ಸಾವಿರ ಹೊಸ ಪಹಣಿ ಸೃಷ್ಟಿ: ಸರ್ಕಾರದ ಜಮೀನನ್ನು ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದರೂ ಪೋಡಿಯಾಗಿಲ್ಲದ ಜಮೀನುಗಳಿಗೆ 12 ಸಾವಿರ ಹೊಸ ಪಹಣಿಗಳನ್ನು ಸೃಜನೆ ಮಾಡಲಾಗಿದ್ದು, ರೈತರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಆಂದೋಲನ ರೂಪದಲ್ಲಿ ಕೆಲಸ ಮಾಡಲಾಗಿದ್ದು, ಇದರಿಂದ ಬಡಜನತೆಗೆ ನೆರವಾಗಲಿದೆ. ಕಂದಾಯ ಇಲಾಖೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು ಸಮಾವೇಶದಲ್ಲಿ ಪಹಣಿ, ಆಕಾರ್ ಬಂದ್, ಮ್ಯೂಟೇಷನ್, ಹಕ್ಕುಪತ್ರ ಪ್ರತಿ ಸೇರಿ ವಿವಿಧ ದಾಖಲೆಗಳನ್ನು ನೀಡಲಾಗುವುದು ಇದರಿಂದ 50 ಸಾವಿರ ಕುಟುಂಬಗಳಿಗೆ ಸಹಾಯವಾಗಲಿದೆ. ವಿವಿಧ ಇಲಾಖೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆ ಕೂಡ ಮಾಡಲಾಗುತ್ತಿದೆ ಎಂದರು.
ಇಂಡಿಗೋ ವಿಮಾನಯಾನ ವಿಳಂಬ : ರದ್ದತಿಗಳಿಗೆ ಸರ್ಕಾರದ ಏಕಸ್ವಾಮ್ಯ ನೀತಿಯೇ ಕಾರಣ: ರಾಹುಲ್ ಗಾಂಧಿ – vishwanews24
ಹಾಸನದಲ್ಲಿ ಪ್ರಜಾಸೌಧ ಲೋಕಾರ್ಪಣೆ: ಜಿಲ್ಲಾ ಉಸ್ತುವಾರಿ ಸಚಿವರ ನಿರ್ದೇಶನದಂತೆ ಜನ ಸಾಮಾನ್ಯರಿಗೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಕಾರ್ಯಕ್ರಮದಲ್ಲಿ ಕಾವೇರಿ ನೀರಾವರಿ ನಿಗಮದಿಂದ ಚನ್ನರಾಯಪಟ್ಟಣ ತಾಲ್ಲೂಕಿನ ಹದಿನೆಂಟು ಕೆರೆಗಳಿಗೆ ನೀರು ಹರಿಸುವ ಯೋಜನೆ, ಲೋಕೋಪಯೋಗಿ ಇಲಾಖೆಯಿಂದ ಅರಸೀಕೆರೆ ತಾಲ್ಲೂಕಿನಲ್ಲಿ ರಸ್ತೆಗಳ ನಿರ್ಮಾಣ, ಕಂದಾಯ ಇಲಾಖೆ ವತಿಯಿಂದ ಹಾಸನದಲ್ಲಿ ಪ್ರಜಾಸೌಧ ಕಟ್ಟಡ, ಸಕಲೇಶಪುರದಲ್ಲಿ ಮಿನಿ ವಿಧಾನಸೌಧದ ಎರಡನೇ ಮತ್ತು ಮೂರನೇ ಹಂತದ ಕಟ್ಟಡ ಉದ್ಘಾಟನೆ ಸೇರಿದಂತೆ ಒಟ್ಟು ವಿವಿಧ ಇಲಾಖೆಗಳಿಂದ 22 ಕಾಮಗಾರಿಗಳ 300 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
1154 ಸಾರಿಗೆ ಬಸ್ ವ್ಯವಸ್ಥೆ: ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶ ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನು ಕರೆ ತರಲು ಜಿಲ್ಲಾಡಳಿತದಿಂದ 1154 ಸಾರಿಗೆ ಬಸ್ ಸೇರಿದಂತೆ 250ಕ್ಕೂ ಹೆಚ್ಚು ಖಾಸಗಿ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಅಂದರೇ ಪ್ರತಿ ತಾಲ್ಲೂಕಿಗೆ ಸುಮಾರು 175 ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಪ್ರತಿ ಗ್ರಾಮ ಪಂಚಾಯಿತಿಗೆ 6 ಬಸ್ ವ್ಯವಸ್ಥೆ ಮಾಡಲಾಗಿದೆ.
18 ಲಕ್ಷ ಆಧಾರ್ ಜೋಡಣೆ ಹಾಸನಕ್ಕೆ ಮೊದಲ ಸ್ಥಾನ: ಹಾಸನ ಜಿಲ್ಲೆಯಲ್ಲಿ 19 ಲಕ್ಷಕ್ಕೂ ಹೆಚ್ಚು ಪಹಣಿಗಳಿದ್ದು, 18 ಲಕ್ಷ ಪಹಣಿಗಳಿಗೆ ಆಧಾರ್ ಜೋಡಣೆ ಮಾಡಲಾಗಿದೆ. ಹಾಸನ ಜಿಲ್ಲೆ ಆಧಾರ್ ಜೋಡಣೆಯಲ್ಲಿ ಮೊದಲ ಸ್ಥಾನದಲ್ಲಿದೆ. ಕಂದಾಯ ಸಚಿವರ ನಿರ್ದೇಶನದಂತೆ ವಂಶವೃಕ್ಷ, ಮರಣ ಪ್ರಮಾಣ ಪತ್ರ ಇತರ ದಾಖಲೆಗಳನ್ನು ಪಡೆದು ಪರಿಶೀಲಿಸಿ ಸುಮಾರು 15 ಸಾವಿರಕ್ಕೂ ಹೆಚ್ಚು ಇ-ಪೌತಿ ಖಾತೆ ಆಂದೋಲನದ ಮೂಲಕ ಖಾತೆ ಮಾಡಲಾಗಿದೆ ಎಂದರು.
ರಷ್ಯಾ ಅಧ್ಯಕ್ಷ ಪುಟಿನ್ಗೆ ಭಗವದ್ಗೀತೆ ಉಡುಗೊರೆ ನೀಡಿದ ಪ್ರಧಾನಿ ಮೋದಿ – vishwanews24
5 ಸಾವಿರ ಜನರಿಗೆ ಹಕ್ಕುಪತ್ರ ವಿತರಣೆ: ಜಿಲ್ಲೆಯಲ್ಲಿ ಸುಮಾರು 50 ಕಂದಾಯ ಗ್ರಾಮಗಳನ್ನು ಅಧಿಕಾರಿಗಳು ಗುರುತಿಸಿದ್ದು, ಲತಾಕುಮಾರಿ ಜಿಲ್ಲಾಧಿಕಾರಿಯಾಗಿ ಬಂದ ನಂತರ ಮತ್ತೆ 40 ಗ್ರಾಮಗಳನ್ನು ಹೆಚ್ಚುವರಿಯಾಗಿ ಗುರುತಿಸಲಾಗಿದ್ದು, ಈ ಗ್ರಾಮಗಳಲ್ಲಿ 10-15 ವರ್ಷಗಳಿಂದ ವಾಸವಾಗಿರುವ, 5000ಕ್ಕೂ ಹೆಚ್ಚು ಜನರಿಗೆ ಹಕ್ಕು ಪತ್ರವನ್ನು ನೀಡಲಾಗುವುದು ಎಂದು ಡಿಸಿ ಮಾಹಿತಿ ನೀಡಿದರು.
