ಡಿ.ಕೆ.ಶಿವಕುಮಾರ್ ನನಗೆ ಗಾಡ್ ಫಾದರ್ , ಅವರಿಗೆ ಮುಖ ತೋರಿಸಲು ನನಗೆ ಮುಜುಗರವಾಗುತ್ತಿದೆ : ಕಾಂಗ್ರೆಸ್ ನಾಯಕ ಸಲೀಂ – Vishwanews24
ಡಿ.ಕೆ.ಶಿವಕುಮಾರ್ ನನಗೆ ಗಾಡ್ ಫಾದರ್ , ಅವರಿಗೆ ಮುಖ ತೋರಿಸಲು ನನಗೆ ಮುಜುಗರವಾಗುತ್ತಿದೆ
ನನ್ನ ಉಸಿರು ಇರುವವರೆಗೂ ನಾನು ಕಾಂಗ್ರೆಸ್ ನಲ್ಲಿರುತ್ತೇನೆ ..
ನನ್ನನ್ನು ಉಚ್ಛಾಟನೆ ಮಾಡಿರುವುದು ನೋವು ತಂದಿದೆ : ಕಾಂಗ್ರೆಸ್ ನಾಯಕ ಸಲೀಂ – Vishwanews24
ಬೆಂಗಳೂರು : ಡಿ.ಕೆ.ಶಿವಕುಮಾರ್ ನನಗೆ ಗಾಡ್ ಫಾದರ್, ನನ್ನ ಉಸಿರು ಇರುವವರೆಗೂ ನಾನು ಕಾಂಗ್ರೆಸ್ ನಲ್ಲಿರುತ್ತೇನೆ. ನಾನು ಕೆಪಿಸಿಸಿ ಸದಸ್ಯ ಕೂಡ ಹೌದು. ಆದರೆ ನನ್ನನ್ನು ಉಚ್ಛಾಟನೆ ಮಾಡಿರುವುದು ನೋವು ತಂದಿದೆ ಎಂದು ಕಾಂಗ್ರೆಸ್ ನಾಯಕ ಸಲೀಂ ಹೇಳಿಕೆ ನೀಡಿದ್ದಾರೆ.
ನೀರಾವರಿ ಇಲಾಖೆಯಲ್ಲಿ ನಡೆದ ನೂರಾರು ಕೋಟಿ ಅವ್ಯವಹಾರದ ಬಗ್ಗೆ ಮಾತನಾಡುತ್ತಿದ್ದೆವು. ನಾನು ಬಿ.ವೈ. ವಿಜಯೇಂದ್ರ ಅವರ ಬಗ್ಗೆ ಮಾತನಾಡಿದ್ದೆ. ಇದೆಲ್ಲವೂ ನಾನಾಡಿದ ಮಾತಿನ ಮುಂದಿನ ಭಾಗದಲ್ಲಿ ಇದೆ. ಆದರೆ ಅರ್ಧ ಮಾತ್ರ ತೋರಿಸಲಾಗಿದೆ. ಡಿಕೆಶಿ ಮೇಲಿನ ಐಟಿ ದಾಳಿ ಬಗ್ಗೆ ನಾನೇ ಹೋರಾಟ ಕೂಡ ಮಾಡಿದ್ದೆ. ತೊದಲು ಮಾತನಾಡುತ್ತಾರೆ ಎಂಬ ವೈರಲ್ ವಿಡಿಯೋ ಬಗ್ಗೆ ಚರ್ಚೆ ಮಾಡಿದ್ದೇನೆ ಬಿಟ್ಟರೆ ಡಿಕೆಶಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಇವಾಗ ಡಿಕೆಶಿ ಅವರಿಗೆ ಮುಖ ತೋರಿಸಲು ನನಗೆ ಮುಜುಗರವಾಗುತ್ತಿದೆ ಎಂದು ಹೇಳಿದ್ದಾರೆ.
ಸಲೀಂ ಮತ್ತು ಉಗ್ರಪ್ಪ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ನೀಡಿದ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಿನ್ನೆ ನಡೆದ ಘಟನೆಯಿಂದ ನಾನು ಸಾಕಷ್ಟು ನೊಂದಿದ್ದೇನೆ. ನನಗೆ ಮುಖ ತೋರಿಸಲು ಮುಜುಗರವಾಗುತ್ತಿದೆ ಎಂದು ಸಲೀಂ ಹೇಳಿದ್ದಾರೆ.
ಮಂಗಳೂರು: ಅ. 16ರಂದು ಸುಳ್ಯ ತಾಲೂಕಿನಲ್ಲಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ – Vishwanews24
