ಡಿ.ಕೆ.ಶಿವಕುಮಾರ್ ಬಂಧನ ಮಾಡಿಸಿ ಯಾರನ್ನು ಹೀರೋ ಮಾಡುವ ಅಗತ್ಯ ನಮಗೆ ಇಲ್ಲ : ಜೆ.ಸಿ.ಮಾಧುಸ್ವಾಮಿ‌ -Vishwanews24

Featured, ರಾಜ್ಯ ನ್ಯೂಸ್

ಬೆಳಗಾವಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಮಾಡಿಸಿ ಯಾರನ್ನು ಹೀರೋ ಮಾಡುವ ಅಗತ್ಯ ನಮಗೆ ಇಲ್ಲ ಎಂದು ಕಾನೂನು ಸಂಸದೀಯ ವ್ಯವಹಾರಗಳ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ‌ ಹೇಳಿದರು.

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಡಿ ಇಲಾಖೆಯ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು‌ ಬಂಧನ ಮಾಡಿರುವುದು ಸ್ವಾಭಾವಿಕ. ಅದರ ಬಗ್ಗೆ ಪ್ರತಿಕ್ರಿಯೆ ನೀಡುವ ಅಗತ್ಯ ಬಿಜೆಪಿಗೆ ಇಲ್ಲ ಎಂದು ಹೇಳಿದರು.

ನಾವು ಕೆಟ್ಟ ರಾಜಕಾರಣ ಮಾಡಿಕೊಂಡು ಬಂದಿಲ್ಲ. ಡಿಕೆ.ಶಿವಕುಮಾರ್ ಬಂಧನ ಮಾಡಿಸಬೇಕಾದ ಅವಶ್ಯಕತೆ, ಹಠ ಇಲ್ಲ. ಅವರನ್ನ ಬಂಧನ ಮಾಡಿಸಿ ಹೀರೊ ಮಾಡಿಸುವ ಅಗತ್ಯನೇ ಇಲ್ಲ ಎಂದು‌ ಖಾರವಾಗಿ ಪ್ರತಿಕ್ರಿಯಿಸಿದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನವಾಗಿರುವುದು ಸ್ವತಃ ಅವರೆ ಹೇಳಿದ್ದಾರೆ. ನಾವೇ ಮಾಡಿದ ಅಧಿಕಾರಿಗಳು, ನಾವೇ ಕಾನೂನು ರಚನೆ ಮಾಡಿದವರೆ ನಮ್ಮನ್ನು‌ ಬಂಧಿಸಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಬಿಜೆಪಿ ಹೊಣೆ ಎನ್ನುವುದು ತಪ್ಪು ಕಲ್ಪನೆ ಎಂದರು.