ಡಿಸಿ ನಿವಾಸ ಸ್ವಚ್ಛ ಮಾಡಿದ ಉಡುಪಿ ಜಿಲ್ಲಾಧಿಕಾರಿ ಜಗದೀಶ್…!!! vishwanews24

Featured, ಉಡುಪಿ

ಉಡುಪಿ: ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವ್ರು ಓರ್ವ ಪ್ರಾಮಾಣಿಕ, ಜನಸಾಮಾನ್ಯರಿಗೆ ಹತ್ತಿರವಾಗಿದ್ದುಕೊಂಡು ನೆರವಾಗುವಂತವರು. ಇವ್ರು ಇಂದು ಕರೋನಾ ಎಫೆಕ್ಟ್ ನ ಪರಿಣಾಮ ಜನತಾ ಕರ್ಫ್ಯೂಗೆ ಬೆಂಬಲ ನೀಡಿದ್ದಾರೆ.

ಅದು ಯಾವ ರೀತಿ ಅಂದ್ರೆ ನಿಮ್ಗೂ ಹಿತ ಅನಿಸಬಹುದು. ಹೌದು ಉಡುಪಿ ಜಿಲ್ಲಾಧಿಕಾರಿ ಬೇರೆ ಸರ್ಕಾರಿ ಅಧಿಕಾರಿಗಳಂತಲ್ಲ. ಇವ್ರು ಸಿಂಪಲ್ ಆಗಿ ಮನಸ್ಸಿರುವುಂತ ವ್ಯಕ್ತಿತ್ವ. ಅದ್ರಂತೆ ಇಂದು ಜನತಾ ಕರ್ಫ್ಯೂ ಹಿನ್ನೆಲೆಯಲ್ಲಿ ಎಲ್ಲಿಯೂ ಸುತ್ತಾಡದೆ ತಮ್ಮ ಜಿಲ್ಲಾಧಿಕಾರಿ ನಿವಾಸದಲ್ಲೇ ಇದ್ದು, ಖುದ್ದು ಅವ್ರೇ ತಮ್ಮ ಗಾರ್ಡನ್ ನನ್ನು ಜೋಡಿಸಿ, ಸ್ವಚ್ಛ ಮಾಡಿ ಇತರರಿಗೆ ಮಾದರಿಯಾದ್ರು.

ಇದನ್ನ ಉಡುಪಿ ಜಿಲ್ಲಾಧಿಕಾರಿಗಳ ಫೇಸ್ ಬುಕ್ ಪೇಜ್ ನಲ್ಲಿ ಚಿತ್ರಗಳನ್ನ ಅಪ್ಲೋಡ್ ಮಾಡಿದ್ದು, ಜನರಿಂದ ಇದಕ್ಕೆ ಭರಪೂರ ಪ್ರಶಂಸೆ ವ್ಯಕ್ತವಾಗಿದೆ. ಇಡೀ ಉಡುಪಿ ಜನತೆ ಜಿಲ್ಲಾಧಿಕಾರಿಗಳನ್ನ ಹಾಡಿ ಹೊಗಲಿದ್ದಾರೆ. ನಿಮ್ಮಂತ ಮಾದರಿ ಅಧಿಕಾರಿ ನಮ್ಮ ಜಿಲ್ಲೆಗೆ ಮುಖ್ಯ ಅನ್ನುವಂತ ಹಲವಾರು ಕಮೆಂಟ್ಸ್ ಗಳು ಫೇಸ್ ಬುಕ್ ನಲ್ಲಿ ಜನರು ಬರೆದುಕೊಂಡಿದ್ದಾರೆ.

error: Content is protected !!