ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಮಾಡಿಯೇ ಸಿದ್ದ : ವಾಟಾಳ್ ನಾಗರಾಜ್ -Vishwanews24

Featured, ರಾಜ್ಯ ನ್ಯೂಸ್

 ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಮಾಡಿಯೇ ಸಿದ್ದ : ವಾಟಾಳ್ ನಾಗರಾಜ್ -Vishwanews24

ಡಿಸೆಂಬರ್ 5 ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ನಡೆಸುತ್ತೇವೆ..

ಕರ್ನಾಟಕ ಬಂದ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಗಳು ಭಾಗವಹಿಸಲು ವಾಟಾಳ್ ನಾಗರಾಜ್ ಮನವಿ

ಬೆಂಗಳೂರು : ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಮಾಡಿಯೇ ಸಿದ್ದ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.

ರಾಜ್ಯ ಸರಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ಮಾಡಲು ಹೊರಟಿದ್ದು ಇದರಿಂದ ರಾಜ್ಯದ ಕನ್ನಡ ಪರ ಸಂಘಟನೆಗಳು ಮರಾಠ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ದನಿ ಎತ್ತಿದ್ದಾರೆ ಕೂಡಲೇ ಸರಕಾರ ತಮ್ಮ ನಿಲುವನ್ನು ಬದಲಿಸಬೇಕೆಂದು ಹೇಳಿದ್ದು, ಇಲ್ಲದಿದ್ದಲ್ಲಿ ಬಂದ್ ಶತಃಸಿದ್ಧ ಎಂದಿದ್ದಾರೆ.

ಕರ್ನಾಟಕ ಬಂದ್ ಕುರಿತು ಸುದ್ದಿಗೋಷ್ಠಿ ನಡೆಸಿದ ವಾಟಾಳ್ ನಾಗರಾಜ್ ಯಾವುದೇ ಕಾರಣಕ್ಕೂ ಡಿಸೆಂಬರ್ 5ರ ಬಂದ್ ಹಿಂಪಡೆಯುವುದಿಲ್ಲ, ಬಂದ್ ಮಾಡಿಯೇ ಸಿದ್ದ ಎಂದಿದ್ದಾರೆ ಸಾಧ್ಯವಾದರೆ ಸರಕಾರ ನಮ್ಮ ಬಂದ್ ತಡೆಯಲಿ ಎಂದು ಹೇಳಿದ್ದಾರೆ.

ಡಿಸೆಂಬರ್ 5 ರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ನಡೆಸುತ್ತೇವೆ ಎಂದಿದ್ದಾರೆ.

ಮರಾಠ ನಿಗಮ ರಚನೆಯನ್ನು ಕೈಬಿಡಲು ನವೆಂಬರ್ 30ರ ವರೆಗೆ ಕಾಲಾವಕಾಶ ನೀಡಿದ್ದು ಸರಕಾರ ಇದಕ್ಕೆ ಸ್ಪಂದಿಸದಿದ್ದಲ್ಲಿ ಬಂದ್ ಬಿಸಿ ತಾಗಲಿದೆ ಎಂದಿದ್ದಾರೆ.

ಕರ್ನಾಟಕ ಬಂದ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನೆಗಳು ಭಾಗವಹಿಸಲು ವಾಟಾಳ್ ನಾಗರಾಜ್ ಮನವಿಯನ್ನು ಮಾಡಿದ್ದಾರೆ.