ಡಿಸೆಂಬರ್ 7 ಕಂಚಿನಡ್ಕದಲ್ಲಿ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್.

Featured, ಉಡುಪಿ

ಡಿಸೆಂಬರ್ 7 ಕಂಚಿನಡ್ಕದಲ್ಲಿ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್.

ಕಾಪು: ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರತಿಭಾನ್ವಿತ ಬ್ಯಾಡ್ಮಿಂಟನ್ ಆಟಗಾರರನ್ನು ಒಳಗೊಂಡ ಮೂರನೆಯ ಆವೃತ್ತಿಯ ಹೊನಲು ಬೆಳಕಿನ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ 2019 ಪಂದ್ಯಾಟ ಡಿಸೆಂಬರ್ 7 ರಂದು ಶನಿವಾರ ಸಂಜೆ 7 ಗಂಟೆಗೆ ಕಂಚಿನಡ್ಕದ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕಾಪುವಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಪದ್ಮನಾಭ ಕಂಚಿನಡ್ಕ ಹೇಳಿದರು.

ಸುಮಾರು ಹತ್ತು ಮಂದಿ ಮಾಲಕರ ತಂಡಗಳು ಈ‌ ಕ್ರೀಡೆಯಲ್ಲಿ ಭಾಗವಹಿಸಲಿದೆ.ಕಾರ್ಯಕ್ರಮದ ಉದ್ಘಾಟನೆಯನ್ನು ವಿವಿಧ ನೆರವೇರಿಸಲಿದ್ದಾರೆ.

ಪ್ರಮುಖ ಆಕರ್ಷಣೆ

ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಆಟಗಾರ ಶ್ರೀ ಸಂಜಯ್ , ಮಲೇಷಿಯಾದಲ್ಲಿ ನಡೆಯುತ್ತಿರುವ ಸ್ಟೂಡೆಂಟ್ ಏಷ್ಯನ್ ಗೇಮ್ ಆಯ್ಕೆಗೊಂಡ ಆಟಗಾರ ವಿನಯ್.ಡಿ.ಆರ್,ಮನೀಶ್ ಮಿನ್ನ ಪಡುಬಿದ್ರಿ, ಮನೋಜ್ ಹೆಜಮಾಡಿ,ಶಿವ ಬೆಳ್ತಂಗಡಿ ಅಜಯ್ ಶೆಟ್ಟಿ ಪ್ರಣಮ್ ಬೆಂಗಳೂರು ಭಾಗವಹಿಸಲಿರುವರು .

ಪತ್ರಿಕಾಗೋಷ್ಠಿಯಲ್ಲಿ ಶಂಕರ್ ಕಂಚಿನಡ್ಕ, ಕೃಷ್ಣ ಬಂಗೇರ ಕಂಚಿನಡ್ಕ,ತಾರಾನಾಥ್ ಅಮೀನ್,ನಾಗೇಶ್‌ಮೂಡಬಿದ್ರೆ, ಸಂತೋಷ್ ನಂಬಿಯಾರ್ ಉಪಸ್ಥಿತಿತರಿದ್ದರು