ಢಾಕಾ : ಪ್ರಯಾಣಿಕರ ಹಡಗಿನಲ್ಲಿ ಅಗ್ನಿ ಅವಘಡ: 36 ಮಂದಿ ಸಜೀವ ದಹನ, 200 ಜನರ ಸ್ಥಿತಿ ಗಂಭೀರ – VIshwanews24

Featured, ಅಂತಾರಾಷ್ಟ್ರೀಯ ನ್ಯೂಸ್

ಢಾಕಾ : ಪ್ರಯಾಣಿಕರ ಹಡಗಿನಲ್ಲಿ ಅಗ್ನಿ ಅವಘಡ: 36 ಮಂದಿ ಸಜೀವ ದಹನ, 200 ಜನರ ಸ್ಥಿತಿ ಗಂಭೀರ – VIshwanews24

ಢಾಕಾ: ಬಾಂಗ್ಲಾದೇಶದ ನದಿಯೊಂದರಲ್ಲಿ ಪ್ರಯಾಣಿಕರು ಮತ್ತು ಸರಕುಗಳನ್ನು ಸಾಗಿಸುತ್ತಿದ್ದ ಹಡಗಿಗೆ ಬೆಂಕಿಹೊತ್ತಿಕೊಂಡ  ಪರಿಣಾಮ ಸುಮಾರು 32 ಮಂದಿ ದುರ್ಮರಣಕ್ಕೀಡಾಗಿದ್ದಾರೆ.ಘಟನೆಯನ್ನು ಸುಮಾರು 200 ಮಂದಿ ಗಂಭೀರವಾಗಿ ಗಾಯಗೊಂಡಿರುವುದಾಗಿ ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇಂದು (ಡಿ.24) ನಸುಕಿನ ಜಾವ 3 ಗಂಟೆ ಸಮಯದಲ್ಲಿ ಬಾಂಗ್ಲಾದ ಬಾರ್ಗಾನ ಮೂಲದ ಎಂವಿ ಅಭಿಜಾನ್​-10 ಹೆಸರಿನ ಪ್ರಯಾಣಿಕರ ಹಡಗಿನ ಇಂಜಿನ್​ ರೂಮ್​ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಬಳಿಕ ಬೆಂಕಿಯ ಜ್ವಾಲೆ ಹೆಚ್ಚಾಗಿ 36 ಮಂದಿಯನ್ನು ಬಲಿ ಪಡೆದುಕೊಂಡಿದೆ. ಹಡಗು ಢಾಕಾದಿಂದ ಪ್ರಯಾಣ ಬೆಳೆಸಿತ್ತು.

ಮೂರು ಮಹಡಿಯ ಹಡಗಿನಲ್ಲಿ ನದಿಯ ಮಧ್ಯಭಾಗದಲ್ಲಿ ಇದ್ದಾಗ ಬೆಂಕಿ ಹೊತ್ತಿಕೊಂಡಿತು. ಘಟನೆಯ ಬಳಿಕ ಪೊಲೀಸ್ ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಈವರೆಗೆ 32 ಜನರ ಮೃತ ದೇಹಗಳನ್ನು ಹೊರತೆಗೆದಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೆಚ್ಚಿನವರು ಬೆಂಕಿಯಿಂದ  ಗಂಭೀರ ಸುಟ್ಟಗಾಯಗಳಾಗಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬೆಂಕಿಯಿಂದ ಸುಟ್ಟ ಗಾಯಗಳಾಗಿರುವುದರಿಂದ 100 ಮಂದಿಯನ್ನು ಪಕ್ಕದಲ್ಲಿರುವ ಬರಿಸಲಾನ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ ಎಂದು ಹೇಳಿದ್ದಾರೆ.

ಓಮಿಕ್ರಾನ್ ಆತಂಕ : ಉತ್ತರಪ್ರದೇಶದಲ್ಲಿ ನಾಳೆಯಿಂದ ರಾತ್ರಿ ಕರ್ಫ್ಯೂ ಜಾರಿ – Vishwanews24

 

Leave a Reply