ತಮ್ಮ ಜನ್ಮ ದಿನವನ್ನು” ಬೀದಿ ಶ್ವಾನ ಸಂರಕ್ಷಣಾ” ದಿನವನ್ನಾಗಿ ಆಚರಿಸುವಂತೆ ಅಭಿಮಾನಿ ಭಕ್ತರಿಗೆ ಕರೆ ನೀಡಿದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ – vishwanews24
ತಮ್ಮ ಜನ್ಮ ದಿನವನ್ನು ” ಬೀದಿ ಶ್ವಾನ ಸಂರಕ್ಷಣಾ” ( Street Dog Protection Day ) ದಿನವನ್ನಾಗಿ ಆಚರಿಸುವಂತೆ ಅಭಿಮಾನಿ ಭಕ್ತರಿಗೆ ಕರೆ ನೀಡಿದ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ
ಉಡುಪಿ: ಹತ್ತು ಹಲಾವರು ವಿಶಿಷ್ಟವಾದ ಕಾರ್ಯಕ್ರಮ ಹಾಗೂ ಸೇವೆಗಳಿಂದ ಪ್ರಚಲಿತಗೊಂಡ ಶಂಕರಪುರ ದ್ವಾರಕಮಾಯಿ ಸಾಯಿ ಮಂದಿರದ ಗುರುಗಳಾದ ಸಾಯಿ ಈಶ್ವರ್ ನವಂಬರ್ 12 ರಂದು ಆಚರಿಸುವ ತಮ್ಮ ಜನ್ಮದಿನಾಚರಣೆಯನ್ನು ದೇಗುಲದ ಭಕ್ತರಿಗೆ ” ಬೀದಿ ಶ್ವಾನ ಸಂರಕ್ಷಣಾ” ( Street Dog Protection Day ) ದಿನವನ್ನಾಗಿ ಆಚರಿಸುವಂತೆ ಅಭಿಮಾನಿಗಳು ಹಾಗೂ ದೇಗುಲದ ಭಕ್ತರಿಗೆ ಕರೆ ನೀಡಿದ್ದಾರೆ.
ಪ್ರಾಣಿ ಪಕ್ಷಿಗಳ ಮೇಲೆ ಅಪಾರ ಪ್ರೀತಿಯನ್ನು ಇಟ್ಟುಕೊಂಡು ತಮ್ಮದೆ ಶೈಲಿಯಲ್ಲಿ ಅವುಗಳ ಸಂರಕ್ಷಣೆ ಮೋಕ್ಷಗಳನ್ನು ಮಾಡುತ್ತಿದ್ದ ಅವರು ಈ ಸಲ ವೈಶಿಷ್ಟ್ಯ ಕೆಲಸಕ್ಕೆ ಮುಂದಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಹೃದಯವಂತ ಪ್ರಾಣಿ ಪ್ರಿಯರು ಬೀದಿ ಶ್ವಾನಗಳನ್ನು ರಕ್ಷಿಸಿ ಸಂರಕ್ಷಿಸುಲು ಸಂರಕ್ಷಣ ಕೇಂದ್ರಗಳ ಮುಖೇನ ಬೀದಿ ಶ್ವಾನಗಳ ಆರೈಕೆ ಮಾಡುತ್ತಿದ್ದು ಇಂತಹ ಪುಣ್ಯದ ಸೇವೆಗೆ ಸಾರ್ವಜನಿಕರು ಪ್ರೋತ್ಸಾಹಿಸಬೇಕು ಮತ್ತು ಶ್ವಾನಗಳ ಸಂತತಿ ಉಳಿಸಲು ಪ್ರತಿಯೊಬ್ಬ ಪ್ರಜೆಯು ಮುಂದಾಗ ಬೇಕೆಂಬುದಾಗಿ ಶ್ರೀ ಸಾಯಿ ಈಶ್ವರ್ ಗುರೂಜಿಯವರು ತಮ್ಮ ಅಭಿಮಾನಿ ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.
2024 ನವಂಬರ್ 12 ರ ಬೆಳಿಗ್ಗೆ 11:30ಕ್ಕೆ ಶ್ರೀ ಕ್ಷೇತ್ರ ಶಂಕರಪುರದಲ್ಲಿ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಹೃದಯವಂತ ಪ್ರಾಣಿ ಪ್ರಿಯರ ಉಪಸ್ಥಿತಿಯಲ್ಲಿ ಬೀದಿ ಶ್ವಾನ ಸಂರಕ್ಷಣಾ ದಿನಾಚರಣೆಗೆ ಚಾಲನೆ ನೀಡಲಾಗುವುದೆಂದು ಎಂದು ದೇಗುಲದ ಪ್ರಕಟಣೆ ತಿಳಿಸಿದೆ.
