ತಾಕತ್ತಿದ್ದರೆ ಆರ್‌ಎಸ್‌ಎಸ್‌, ಭಜರಂಗದಳವನ್ನು ಬ್ಯಾನ್‌ ಮಾಡಲಿ: ಎಚ್‌ಡಿಕೆ ಗೆ ಪ್ರಭಾಕರ್ ಭಟ್ ಸವಾಲು -Vishwanews24

Featured, ರಾಜ್ಯ ನ್ಯೂಸ್

ಚಿತ್ರದುರ್ಗ: ಆರ್‌ಎಸ್‌ಎಸ್ ಹಾಗೂ ಭಜರಂಗದಳ ಸಂಘಟನೆಯನ್ನು ತಾಕತ್ತಿದ್ದರೆ ಬ್ಯಾನ್ ಮಾಡಲಿ ಅಂತ ಮಾಜಿ ಸಿಎಂ ಹೆಚ್‌ಡಿಕೆಗೆ ಕಲ್ಲಡ್ಕ ಪ್ರಭಾಕರ್ ಸವಾಲು ಹಾಕಿದ್ದಾರೆ.

ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ಅವರು ಭೇಟಿದ ಬಳಿಕ ಮಾತನಾಡಿದ ಅವರು ಆರ್‌ಎಸ್‌ಎಸ್, ಭಜರಂಗದಳ ನಿಷೇಧಿಸುವಂತೆ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಸಿದ ಅವರು ಶಿಸ್ತು, ದೇಶಭಕ್ತಿ ಬೆಳೆಸುವ ಆರ್‌ಎಸ್‌ಎಸ್ ಹಾಗೂ ಭಜರಂಗದಳ ಸಂಘಟನೆಯನ್ನು ತಾಕತ್ತಿದ್ದರೆ ಬ್ಯಾನ್ ಮಾಡಲಿ ಎಂದು ಹೆಚ್‍ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನು ಇದೇ ವೇಳೆ ಅವರು ಮಾತನ್ನು ಮುಂದುವರೆಸಿದ ಅವರು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಲ್‍ನಲ್ಲಿ ಗೋಮಾಂಸ ತಿನ್ನುವುದಾಗಿ ಹೇಳಿದ್ದರು. ಗಾಂಧೀಜಿ ಹೇಳಿದ ಮಾತನ್ನು ಕಾಂಗ್ರೆಸ್ಸಿನವರು ಸೇರಿದಂತೆ ಯಾರೂ ಸಹ ಪಾಲನೆ ಮಾಡುತ್ತಿಲ್ಲ ಎನ್ನುವುದು ಇದರಿಂದಲೇ ತಿಳಿಯುತ್ತದೆ. ಆರ್‌ಎಸ್‌ಎಸ್ ಪ್ರತಿ ಶಿಬಿರಗಳಲ್ಲಿ ಅಂಬೇಡ್ಕರ್ ಬಗ್ಗೆ ವಿಚಾರ ಚಿಂತನೆಗಳನ್ನು ನಡೆಸಲಾಗುತ್ತದೆ. ಅವರ ವಿಚಾರಧಾರೆಗಳು ಎಲ್ಲರಿಗೂ ಪ್ರೇರೇಪಣೆ ಮಾಡುವಂತದ್ದು ಅಂತ ಹೇಳಿದರು.