ತಾರತಮ್ಯದ ಮತ್ತು ಕರಾವಳಿ ಭಾಗವನ್ನ ನಿರ್ಲಕ್ಷಿಸಿದ ಬಜೆಟ್: ಕಾಪು ಶಾಸಕ ಲಾಲಾಜಿ ಆರ್ ಮೆಂಡನ್
ತಾರತಮ್ಯದ ಮತ್ತು ಕರಾವಳಿ ಭಾಗವನ್ನ ನಿರ್ಲಕ್ಷಿಸಿದ ಬಜೆಟ್: ಕಾಪು ಶಾಸಕ ಲಾಲಾಜಿ ಆರ್ ಮೆಂಡನ್
Bengaluru: ನೂತನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಂಡಿಸಿದ ಈ ವರ್ಷದ ಮೊದಲ ಬಜೆಟ್ ಮಂಡಸಿದ್ದು ಈ ಬಗ್ಗೆ ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ವ್ಯಾಪಕ ಅಸಮಾಧಾನ ವ್ಯಕ್ತಪಡಿಸಿದರು. ಮಾಧ್ಯಮದವರ ಜತೆ ಮಾತಾಡುತ್ತ” ಕರಾವಳಿ ಭಾಗಕ್ಕೆ ಹೆಚ್ಚಿನ ಒತ್ತು ನೀಡುತ್ತಾರೆಂಬ ನಿರೀಕ್ಷೆಯಲ್ಲಿದ್ದೆವು ಆದರೆ ಈ ಭಾಗವನ್ನ ಸಂಪೂರ್ಣವಾಗಿ ನಿರ್ಲಕ್ಷಿಸಿ ತಾರತಮ್ಯದ ಬಜೆಟ್ ಮಂಡನೆ ಮಾಡಿದ್ದಾರೆಂದರು, ಕಾಪು ಹೊಸ ತಾಲೂಕು ಘೋಷಣೆಯಾಗಿದ್ದರೂ ಕೂಡ ಯಾವುದೇ ರೀತಿಯ ಅನುದಾನ ಅಥವಾ ಪ್ರಸ್ತಾವನೆಯು ಇರಲಿಲ್ಲವೆಂದು ಅಕ್ರೋಶ ವ್ಯಕ್ತಪಡಿಸಿದರು.
