ತಿಂಗಳೆ ಪ್ರತಿಷ್ಠಾನ : ಜಿಲ್ಲೆಯ ಐವರು ಶಾಸಕರೊಂದಿಗೆ ನನ್ನ ಕ್ಷೇತ್ರ – ನನ್ನ ಕನಸು ಒಂದು ಸಂವಾದ : vishwanews24
ತಿಂಗಳೆ ಪ್ರತಿಷ್ಠಾನ : ಜಿಲ್ಲೆಯ ಐವರು ಶಾಸಕರೊಂದಿಗೆ ನನ್ನ ಕ್ಷೇತ್ರ – ನನ್ನ ಕನಸು ಒಂದು ಸಂವಾದ : vishwanews24
ಉಡುಪಿ:ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ತಿಂಗಳೆ ಪ್ರತಿಷ್ಠಾನ (ರಿ) ವತಿಯಿಂದ ಉಡುಪಿ ಜಿಲ್ಲೆಯ ನೂತನವಾಗಿ ವಿಧಾನಸಭೆಗೆ ಆಯ್ಕೆಯಾದ ಕಾಪು-ಕಾರ್ಕಳ-ಕುಂದಾಪುರ-ಬೈಂದೂರು,- ಉಡುಪಿ ಕ್ಷೇತ್ರದ ಶಾಸಕರು ಸಾರ್ವಜನಿಕರ ನಡುವೆ ನೇರ ಕೊಂಡಿಯ ರೂಪದಲ್ಲಿ ನನ್ನ ಕ್ಷೇತ್ರ ನನ್ನ ಕನಸು ಎಂಬ ಸಂವಾದ ಕಾರ್ಯಕ್ರಮ ಜೂನ್ 6 ರಂದು ಶುಕ್ರವಾರ ಸಂಜೆ 3.30ಕ್ಕೆ ರವೀಂದ್ರ ಮಂಟಪ ಎಂಜಿಎಂ ಕಾಲೇಜಿನಲ್ಲಿ ನಡೆಯಲಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧರ್ಮದರ್ಶಿಗಳಾದ ಬಿ ಅಪ್ಪಣ್ಣ ಹೆಗ್ಡೆ, ಹಿರಿಯ ಪತ್ರಕರ್ತರಾಗಿ ಶ್ರೀರಾಜ ಗುಡಿ ಉಪಸ್ಥಿತರಿರುವರು ಮತ್ತು ಹಿರಿಯ ಪತ್ರಕರ್ತರಾದ ಮನೋಹರ ಪ್ರಸಾದ್ ಅವರು ಸಂವಾದ ನಡೆಸಿಕೊಡಲಿದ್ದಾರೆಂದು ಅವರು ತಿಳಿಸಿದರು.
ಈ ಸಂಧರ್ಭದಲ್ಲಿ ಕಿರಣ್ ಕುಮಾರ್ ಬೈಲೂರು,ಸಂತೋಷ್ ಜತ್ತಣ್ಣ ಉಪಸ್ಥಿತರಿದ್ದರು.
