ತುಮಕೂರು:  25ರ ಯುವತಿ ಜೊತೆ ವಿವಾಹವಾಗಿದ್ದ 45 ವರ್ಷದ ಶಂಕರಣ್ಣ ಆತ್ಮಹತ್ಯೆಗೆ ಶರಣು  – VIshwanews24

Featured, ರಾಜ್ಯ ನ್ಯೂಸ್

ತುಮಕೂರು:  25ರ ಯುವತಿ ಜೊತೆ ವಿವಾಹವಾಗಿದ್ದ 45 ವರ್ಷದ ಶಂಕರಣ್ಣ ಆತ್ಮಹತ್ಯೆಗೆ ಶರಣು 

ತುಮಕೂರು: ಕಳೆದ ವರ್ಷ 45 ವರ್ಷದ ವ್ಯಕ್ತಿ ಜೊತೆಗೆ 25ರ ಯುವತಿ ಮದುವೆಯಾಗಿದ್ದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಆದರೀಗ ಈ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಶಂಕರಣ್ಣ(45) ಮೃತ ದುರ್ದೈವಿಯಾಗಿದ್ದು, ಕಳೆದ ವರ್ಷ ಕುಣಿಗಲ್ ತಾಲೂಕಿನ ಚೌಡನಕುಪ್ಪೆ ಗ್ರಾಮದ ಬಳಿಯಿರುವ ಅಕ್ಕಿಮರಿಪಾಳ್ಯದ ಶಂಕರಣ್ಣ ಮತ್ತು ಮೇಘನಾ ಅವರ ಮದುವೆ ನಡೆದಿತ್ತು.

ಆದರೆ ಮದುವೆಯಾದ ಐದು ತಿಂಗಳಿನಲ್ಲಿಯೇ ಶಂಕರಣ್ಣ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಮೂರ್ನಾಲ್ಕು ದಿನದಿಂದ ಗಂಡ, ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಹೀಗಾಗಿ ಕೋಪ ಮಾಡಿಕೊಂಡು ಸೋಮವಾರ ಮನೆ ಬಿಟ್ಟು ಹೋಗಿದ್ದ ಶಂಕರಣ್ಣನವರು, ಕುಣಿಗಲ್ ತಾಲೂಕಿನ ಅಕ್ಕಿಮರಿಪಾಳ್ಯದಲ್ಲಿದ್ದ ತಮ್ಮ ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.

2021ರ ಅಕ್ಟೋಬರ್​​​ 21ರಂದು ಈ ಜೋಡಿ ಮದುವೆಯಾಗಿತ್ತು.  ಇಬ್ಬರ ನಡುವೆ 15 ವರ್ಷ ಅಂತರವಿದ್ದರೂ ಮದ್ವೆಯಾಗಿದ್ದರು,  ಮೇಘನಾ ಶಂಕರಣ್ಣಗಿಂದಲೂ 15 ವರ್ಷ ಚಿಕ್ಕವರಾಗಿದ್ದು,  ಇದೇ ಕಾರಣಕ್ಕೆ ದೇಶಾದ್ಯಂತ ಈ ಜೋಡಿ ವೈರಲ್​ ಆಗಿತ್ತು.  ಖುದ್ದು ಶಂಕರಣ್ಣ ಬಳಿ ಮೇಘನಾ ಮದ್ವೆ ನಿವೇದನೆ ಮಾಡಿದ್ದರು.   ಆವರೆಗೂ ಮದುವೆಯಾಗದ ಶಂಕರಣ್ಣ ಯುವತಿಯನ್ನ ಒಪ್ಪಿದ್ದರು.  ಸಮೀಪದ ದೇವಾಲಯದಲ್ಲಿ ಶಂಕರ್​​​-ಮೇಘನಾ ಮದುವೆಯಾಗಿದ್ದರು.

ಟಿಪ್ಪು ಹೆಸರಿನಲ್ಲಿ ದೇವರಿಗೆ ಮಾಡುವ ಪೂಜೆ ಅದು ದೇವರಿಗೆ ಮಾಡುವಂತಹ ಅಪಮಾನ : ಕಲ್ಲಡ್ಕ ಪ್ರಭಾಕರ್ ಭಟ್ – Vishwanews24

Leave a Reply