ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಪ್ರೇತ ಮದುವೆ : ಸತ್ತು 25 ವರ್ಷ ಆದ್ಮೇಲೆ ಒಂದಾದ ಜೋಡಿ – vishwanews24

Featured, ದಕ್ಷಿಣ ಕನ್ನಡ

ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಪ್ರೇತ ಮದುವೆ : ಸತ್ತು 25 ವರ್ಷ ಆದ್ಮೇಲೆ ಒಂದಾದ ಜೋಡಿ

ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಪ್ರೇತ ಮದುವೆ ಕಾರ್ಯಕ್ರಮವೊಂದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಮುಂಡೂರು ಎಂಬಲ್ಲಿ ನಡೆಯಿತು. ಹಲವು ವರ್ಷಗಳ ಹಿಂದೆ ಮೃತಪಟ್ಟ ಆನಂದ ಮತ್ತು ಸರೋಜಾ ಎಂಬವರ ಆತ್ಮಗಳಿಗೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದ ದೋಷಗಳು ನಿವಾರಣೆಯಾಗಲಿ ಎಂಬ ಉದ್ದೇಶದಿಂದ ಈ ವಿವಾಹವನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಸಲಾಯಿತು. ಬದುಕಿರುವ ವ್ಯಕ್ತಿಗಳಿಗೆ ಯಾವ ರೀತಿಯಲ್ಲಿ ಮದುವೆ ಕಾರ್ಯ ನಡೆಯುತ್ತದೆಯೋ ಅದೇ ರೀತಿ ಪ್ರೇತಾತ್ಮ ಜೀವಗಳಿಗೂ ಮದುವೆ ಕಾರ್ಯ ನಡೆಸಲಾಯಿತು.

ಈ ಪ್ರೇತ ವಿವಾಹ ಮಾಡಲು ಮುಖ್ಯ ಕಾರಣ ಮೃತ ಆನಂದ ಅವರ ಕುಟುಂಬದಲ್ಲಿ ಕಳೆದ ಕೆಲವು ಸಮಯದಿಂದ ಸಂತಾನ ಭಾಗ್ಯದ ಕೊರತೆ, ವಿವಾಹ ತಡೆ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಕಾಡುತ್ತಿದ್ದವು. ಕುಟುಂಬದ ಕಷ್ಟಗಳಿಗೆ ಕಾರಣವೇನು ಎಂದು ಅರಿಯಲು ಜ್ಯೋತಿಷಿಗಳ ಸಲಹೆಯಂತೆ ‘ಪ್ರಶ್ನಾ ಚಿಂತನೆ’ ನಡೆಸಲಾಯಿತು. ಈ ಪ್ರಕ್ರಿಯೆಯಲ್ಲಿ, ಮೃತಪಟ್ಟ ಆನಂದರವರಿಗೆ ವಿವಾಹವಾಗದೆ ಆ ಆತ್ಮ ಅತೃಪ್ತವಾಗಿದೆ. ಇದರಿಂದಾಗಿ ಕುಟುಂಬದಲ್ಲಿ ಇಂತಹ ಹಲವು ದೋಷಗಳು ಕಂಡು ಬರುತ್ತಿದೆ ಎಂದು ತಿಳಿದು ಬಂದಿತ್ತು ಅದರಂತೆ ಈ ಆತ್ಮಕ್ಕೆ ಮದುವೆ ಮಾಡಿಸಿದರೆ ಎಲ್ಲವೂ ಸರಿಯಾಗುತ್ತದೆ ಎಂದು ಜ್ಯೋತಿಷ್ಯರು ತಿಳಿಸಿದ್ದರು. ಈ ದೋಷವನ್ನು ಪರಿಹರಿಸಿ, ಮೃತ ಆತ್ಮಗಳಿಗೆ ಸದ್ಗತಿ ದೊರಕಿಸಿಕೊಡಲು ಹಾಗೂ ಕುಟುಂಬದ ಸುಕ್ಷೇಮಕ್ಕಾಗಿ ಹಿರಿಯರು ಮತ್ತು ಕುಟುಂಬಸ್ಥರು ಈ ವಿವಾಹವನ್ನು ಜರುಗಿಸಲು ನಿರ್ಧರಿಸಿದರು. ಅದರಂತೆ ಆನಂದರವರ ಕುಟುಂಬದಲ್ಲೇ ಸೋದರ ಸಂಬಂಧದಲ್ಲಿ ಮಾವನ ಮಗಳು ಸರೋಜಾ ಅವರೊಂದಿಗೆ ಆನಂದರವರ ವಿವಾಹವನ್ನು ಮಾಡಲಾಯಿತು.

ಮಂಗಳೂರಿಗೆ ಆಗಮಿಸಿದ ಬಾಲಿವುಡ್ ನಟ ಶಾರುಖ್ ಖಾನ್ – vishwanews24

ಆನಂದ ಎಂಬವರು ಬಾರಿಕೆ ತಿಮ್ಮಪ್ಪ ಮತ್ತು ಗಿರಿಜಾರವರ ಪುತ್ರರಾಗಿದ್ದು ಚಿಕ್ಕ ಪ್ರಾಯದಲ್ಲೇ ನಿಧನರಾಗಿದ್ದರು. ಅದೇ ರೀತಿ ಸರೋಜರವರು ಮುಂಡೂರು ಬದಿಯಡ್ಕ ಮುತ್ತಪ್ಪ ಮತ್ತು ದೇವಕಿಯವರ ಪುತ್ರಿಯಾಗಿದ್ದು ಇವರೂ ಕೂಡಾ ಎಳವೆಯಲ್ಲೇ ನಿಧನ ಹೊಂದಿದ್ದರು. ಇಬ್ಬರೂ ನಿಧನಹೊಂದಿ ಸುಮಾರು 25 ವರ್ಷಗಳ ಕಳೆದಿವೆ. ಈ ಎರಡೂ ಆತ್ಮಗಳಿಗೂ ವಿವಾಹದ ಮುಕ್ತಿ ಕೊಡುವ ಮೂಲಕ ಅವರಿಬ್ಬರ ಕುಟುಂಬದಲ್ಲೂ ಕಂಡು ಬರುತ್ತಿದ್ದ ದೋಷಗಳಿಗೆ ಮುಕ್ತಿ ನೀಡಲಾಯಿತು. ನಮ್ಮ ಪೂರ್ವಜರು ನಮಗೆ ನೀಡಿರುವ ಸಂಸ್ಕಾರ ಮತ್ತು ಆಚರಣೆಗಳು ಕೇವಲ ಮೌಡ್ಯವಲ್ಲ, ಅವುಗಳ ಹಿಂದೆ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಸತ್ಯಗಳಿವೆ. ಜ್ಯೋತಿಷ್ಯದ ಮೂಲಕ ಕಂಡುಬಂದ ದೋಷವನ್ನು ಶಾಸ್ರೋಕ್ತವಾಗಿ ಪರಿಹರಿಸುವ ಮೂಲಕ ನಮ್ಮ ಕುಟುಂಬಕ್ಕೆ ನೆಮ್ಮದಿ. ನೆಮ್ಮದಿ ಸಿಗುತ್ತದೆ ಎಂಬ ನಂಬಿಕೆ ನಮ್ಮದು, ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ವಿವಾಹದ ಬಳಿಕ ನೆಂಟರಿಷ್ಟರಿಗೆ ಮದುವೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಮುಂಡೂರು ಬಾರಿಕೆಯಲ್ಲಿ ನಡೆದ ಈ ವಿಶಿಷ್ಟ ಮದುವೆ ಸಮಾರಂಭವು ಧಾರ್ಮಿಕ ವಿಧಿವಿಧಾನಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿತ್ತು. ಪ್ರೇತ ವಿವಾಹದಲ್ಲಿ ಅಪಾರ ಅನುಭವವಿರುವ ಧರ್ಮಪಾಲ ಶೇಣಿ ಅವರು ಈ ವಿವಾಹದ ಪೌರೋಹಿತ್ಯವನ್ನು ವಹಿಸಿದ್ದರು. ಧರ್ಮಪಾಲ ಶೇಣಿಯವರ ಮಾರ್ಗದರ್ಶನದಲ್ಲಿ ಶಾಸ್ತೋಕ್ತವಾಗಿ ಎಲ್ಲಾ ವಿವಾಹ ವಿಧಿಗಳು ಜರುಗಿದವು. ಕುಟುಂಬದ ಸದಸ್ಯರು ಮೃತ ಆನಂದ ಮತ್ತು ಸರೋಜಾ ಅವರ ಪ್ರತಿನಿಧಿಗಳಾಗಿ ಪಾಲ್ಗೊಂಡು, ಹಿರಿಯರ ಆಶಯವನ್ನು ಪೂರೈಸಿದರು.

ಪಠ್ಯಪುಸ್ತಕ ವಿವಾದದ ಬೆನ್ನಲ್ಲೇ NCERT ಸ್ಪಷ್ಟನೆ – vishwanews24

ಇದು ಹೇಳಲು ಮಾತ್ರ ಪ್ರೇತ ವಿವಾಹ (ಕುಲೆತ ಮದಿಮೆ) ಆದರೆ ಎಲ್ಲಾ ಕಾರ್ಯಕ್ರಮಗಳು ಕೂಡ ಜೀವಂತ ವ್ಯಕ್ತಿಗಳ ಮದುವೆಯ ರೀತಿಯಲ್ಲೇ ನಡೆಯುತ್ತದೆ. ಆರಂಭದಲ್ಲಿ ಹುಡುಗ ಆದರೆ ಆತನಿಗೆ ಹುಡುಗಿ ಹುಡುಕುವ ಕಾರ್ಯ ಆ ಬಳಿಕ ಮಾತುಕತೆ ಎಲ್ಲಾ ನಡೆದು ಸಂಧಾನ ಸರಿ ಹೊಂದಿದರೆ ಮುಂದೆ ವಿವಾಹ ನಿಶ್ಚಿತಾರ್ಥ ನಡೆಯುತ್ತದೆ. ಆ ಬಳಿಕ ಮದುವೆ ದಿನ ನಿಗದಿಯಾಗಿ ಮದುರಂಗಿ ನಂತರ ಮದುವೆ ನಡೆಯುತ್ತದೆ. ಮದುವೆ ದಿನ ಮದುಮಗಳಿಗೆ ಹಾಗೂ ಮದುಮಗನಿಗೆ ಬಟ್ಟೆ ಬರೆಯಿಂದ ಹಿಡಿದು ಚಪ್ಪಲಿ ತನಕ ಎಲ್ಲವೂ ಹೊಸತು ಹಾಕಲಾಗುತ್ತದೆ.

ಆರಂಭದಲ್ಲಿ ಪೂ ಸೀರೆ (ಹೂ ಸೀರೆ ) ಬದಲಿಸುವ ಕಾರ್ಯ ಆಗುತ್ತದೆ. ನಂತರ ಎರಡು ತಲೆಯ ಆಕಾರದ ಮಣ್ಣಿನ ಪಾತ್ರೆಗಳಿಗೆ ಗಂಡು, ಹೆಣ್ಣಿನ ರೀತಿ ಕಣ್ಣು, ಬಾಯಿ, ಮೂಗು, ಮೀಸೆ ಎಲ್ಲಾ ಮಾಡಲಾಗುತ್ತದೆ. ಬಳಿಕ ಒಂದು ಉದ್ದ ಇನ್ನೊಂದು ಅದಕ್ಕಿಂತ ಸ್ವಲ ಚಿಕ್ಕ ಬಾಳೆದಿಂಡನ್ನು ತೆಗೆದುಕೊಂಡು ಅದರ ತುದಿಗೆ ಕೈ ರೀತಿಯಲ್ಲಿ ಒಂದು ಅಡ್ಡಲಾಗಿ ಸಲಾಕೆಯನ್ನು ಇಟ್ಟು ಬಳಿಕ ಎರಡು ಮರಳು ತುಂಬಿಸಿದ ಚೀಲದಲ್ಲಿ ಎರಡೂ ದಿಂಡನ್ನು ನೆಟ್ಟು ಗಟ್ಟಿ ಮಾಡಲಾಗುತ್ತದೆ. ಬಳಿಕ ಬಾಳೆದಿಂಡಿಗೆ ಸಿಂಗಾರ ” ಮಾಡಲಾಗುತ್ತದೆ. ಡಿಂಡಿನ ತುದಿಗೆ ಮಣ್ಣಿನ ಪಾತ್ರೆಯ ತಲೆಯನ್ನು ಇಟ್ಟು ದಿಂಡಿಗೆ ಮಾನವ ರೂಪದ ಹಾಗೆ ಸೀರೆ, ರವಿಕೆ, ಬಳೆ,ಕೊರಳಿಗೆ ಚಿನ್ನದ ಸರ, ಮಲ್ಲಿಗೆ ಹೂ ಎಲ್ಲಾ ತೊಡಿಸಲಾಗುತ್ತದೆ. ಗಂಡಿಗೆ ಅಂಗಿ, ಲುಂಗಿ, ವಾಚ್ ಹೀಗೆ ಮದುಮಗಳು, ಮದುಮಗನ ರೀತಿಯಲ್ಲಿ ಬೊಂಬೆಗಳು ತಯಾರಾಗುತ್ತವೆ. ಬಳಿಕ ಈ ರೀತಿಯ ಮಾನವ ಪ್ರೇತದ ರೂಪಗಳಿಗೆ ಧಾರೆ ಎರೆಯುವಲ್ಲಿಂದ ಹಿಡಿದು ಮಾಂಗಲ್ಯ ಧಾರಣೆ, ಅಕ್ಷತೆ ಹಾಕಿ ಆಶೀರ್ವಾದ ಮಾಡುವ ಕಾರ್ಯಗಳು ಎಲ್ಲವೂ ಮದುವೆಯಂತೆಯೇ ನಡೆಯುತ್ತವೆ. ಕೊನೆಗೆ ಈ ಬೊಂಬೆಗಳನ್ನು ಮನೆಯೊಳಕ್ಕೆ ಕೊಂಡೊಯ್ದು ಕೆಲವೊಂದು ಕಾರ್ಯಕ್ರಮಗಳು ನಡೆದು ಮದುವೆಗೆ ಬಂದ ನೆಂಟರಿಷ್ಟರಿಗೆ ಊಟ ಹಾಕುವಲ್ಲಿಗೆ ಮದುವೆಯ ಕಾರ್ಯಕ್ರಮಗಳು ಮುಗಿಯುತ್ತದೆ.

ರಾಜ್ಯದ 13 ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಉಸ್ತುವಾರಿಯಾಗಿ ಯು.ಟಿ ಖಾದರ್ – vishwanews24

Leave a Reply