ತೆಲುಗು ಖ್ಯಾತ ಖಳನಟ ಜಯಪ್ರಕಾಶ ರೆಡ್ಡಿ ವಿಧಿವಶ -Vishwanews24
ತೆಲುಗು ಖ್ಯಾತ ಖಳನಟ ಜಯಪ್ರಕಾಶ ರೆಡ್ಡಿ ವಿಧಿವಶ -Vishwanews24
ಹೈದರಾಬಾದ್: ತೆಲುಗು ಖ್ಯಾತ ಖಳನಟ ಜಯಪ್ರಕಾಶ ರೆಡ್ಡಿ (74) ಹೃದಯಾಘಾತದಿಂದ ವಿಧಿವಶರಾಗಿದ್ದಾರೆಂದು ಮಂಗಳವಾರ ವರದಿಗಳಿಂದ ತಿಳಿದುಬಂದಿದೆ.
ಹೃದಯಾಘಾತದಿಂದಾಗಿ ಶೌಚಾಲಯದಲ್ಲಿಯೇ ಜಯಪ್ರಕಾಶ್ ರೆಡ್ಡಿಯವರು ಕುಸಿದುಬಿದ್ದು ಕೊನೆಯುಸಿರೆಳೆದಿದ್ದಾರೆಂದು ಹೇಳಲಾಗುತ್ತಿದೆ.
ಜಯಪ್ರಕಾಶ ರೆಡ್ಡಿ ಯವರು (74) ಗುಂಟೂರಿನ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ಅಸುನೀಗಿದ್ದು, ನಟನ ಅಗಲಿಕೆಗೆ ಟಾಲಿವುಡ್ ಸೇರಿದಂತೆ ಇತರೆ ಭಾಷೆಯ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ.
ಬ್ರಹ್ಮಪುತ್ರುಡು ಚಿತ್ರದ ಮೂಲಕ ಟಾಲಿವುಡ್ಗೆ ಪರಿಚಯವಾದ ಜಯಪ್ರಕಾಶ್ ಅವರು ವೆಂಕಟೇಶ್ ಅಭಿನಯದ ಪ್ರೇಮಿಂಚುಕುಂದಾಂ ರಾ ಸಿನಿಮಾದ ಮೂಲಕ ಸಾಕಷ್ಟು ಖ್ಯಾತಿ ಪಡೆದುಕೊಂಡರು. ಭಗವಾನ್, ಬಾವಗಾರು ಬಾಗುನ್ನಾರಾ, ಸಮರ ಸಿಂಹ ರೆಡ್ಡಿ ಸಿನಿಮಾಗಳಲ್ಲಿ ವಿಲನ್ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.
