ತೈಲ ಬೆಲೆ ಏರಿಕೆಗೂ  ಗ್ಯಾರಂಟಿಗೂ ಸಂಬಂಧವಿಲ್ಲ , ಅಭಿವೃದ್ಧಿ ಕೆಲಸಕ್ಕೆ ಏನು ಬೇಕೋ ಅದನ್ನು ಮಾಡುತ್ತೇವೆ : ಡಿಕೆ ಶಿ – vishwanews24

Featured, ರಾಜ್ಯ ನ್ಯೂಸ್

ತೈಲ ಬೆಲೆ ಏರಿಕೆಗೂ  ಗ್ಯಾರಂಟಿಗೂ ಸಂಬಂಧವಿಲ್ಲ , ಎಲ್ಲಾ ಗ್ಯಾರಂಟಿಗಳು  ಮುಂದುವರಿಯುತ್ತವೆ : ಡಿಕೆ ಶಿ

ಬೆಂಗಳೂರು: ತೈಲ ಬೆಲೆ ಏರಿಕೆಗೂ  ಗ್ಯಾರಂಟಿಗೂ ಸಂಬಂಧವಿಲ್ಲ. ಎಲ್ಲಾ ಗ್ಯಾರಂಟಿಗಳು  ಮುಂದುವರಿಯುತ್ತವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಪರಿಶ್ರಮ ನೀಟ್ ಅಕಾಡೆಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಲೆ ಏರಿಕೆಗೆ ಗ್ಯಾರಂಟಿ ಕಾರಣ ಎಂದು ವಿಪಕ್ಷಗಳ ಹೇಳಿಕೆಗೆ ಯಾರು ಏನೇ ಹೇಳಿದರೂ ಬೆಲೆ ಏರಿಕೆಗೆ ಗ್ಯಾರಂಟಿ ಕಾರಣವಲ್ಲ. ಬೆಲೆ ಏರಿಕೆಯನ್ನು ಎಲ್ಲಾ ಸಂದರ್ಭದಲ್ಲಿ ಯಾವ ರೀತಿ ಮಾಡಬೇಕೋ ಆ ರೀತಿ ಮಾಡಿದ್ದೇವೆ. ಬಿಜೆಪಿ ಸರ್ಕಾರದಲ್ಲೂ ಬೆಲೆ ಏರಿಕೆ ಮಾಡಿದ್ದಾರೆ. ಆದರೆ ಅವರಂತೆ ನಾವು ಏರಿಸಿಲ್ಲ ಎಂದು ಸಮರ್ಥನೆ ಮಾಡಿಕೊಂಡರು.

ರೇಣುಕಾಸ್ವಾಮಿ ಕೊಲೆ ಪ್ರಕರಣ : ನಟ ದರ್ಶನ್ ಗೆ ಜು. 4 ರವರೆಗೆ ನ್ಯಾಯಾಂಗ ಬಂಧನ – vishwanews24

ತೈಲ ಬೆಲೆ ಕಡಿಮೆ ಇದ್ದರೂ ಅವರು ಬೆಲೆ ಏರಿಕೆ ಮಾಡಿದ್ರು. ನಾವು ಅದನ್ನು ಕಂಟ್ರೋಲ್‌ನಲ್ಲಿ ಇಟ್ಟುಕೊಂಡು ಪಕ್ಕದ ರಾಜ್ಯಗಳಿಗೆ ಬ್ಯುಸಿನೆಸ್ ಜಾಸ್ತಿ ಹೋಗುತ್ತಿತ್ತು. ಆ ದೃಷ್ಟಿಯಿಂದ ಪಕ್ಕದ ರಾಜ್ಯದಲ್ಲಿ ಬ್ಯುಸಿನೆಸ್ ಕಂಟ್ರೋಲ್ ಆಗಲಿ ಎಂದು ಮಾಡಿದ್ದೇವೆ. ಒಂದು ರಾಜ್ಯ ಬಿಟ್ಟು ಎಲ್ಲಾ ರಾಜ್ಯದಲ್ಲೂ ಜಾಸ್ತಿ ಇದೆ. ಗ್ಯಾರಂಟಿಗಳಿಗೂ ಬೆಲೆ ಏರಿಕೆಗೂ ಸಂಬಂಧವಿಲ್ಲ. ಎಲ್ಲಾ ಗ್ಯಾರಂಟಿಗಳು ಮುಂದುವರಿಯುತ್ತವೆ. ಅಭಿವೃದ್ಧಿ ಕೆಲಸಕ್ಕೆ ಏನು ಬೇಕೋ ಅದನ್ನು ಮಾಡುತ್ತೇವೆ ಎಂದರು.

ದಾಖಲಾತಿ ಇಲ್ಲದೇ ಬಾಡಿಗೆ ಮನೆ ನೀಡುವಂತಿಲ್ಲ : ಉಳ್ಳಾಲ ಪೊಲೀಸ್ – vishwanews24

Leave a Reply