ತ್ರಿವಳಿ ತಲಾಖ್ ನಿಂದ ಬಿಡುಗಡೆಯಾಗಲು ಹಿಂದೂ ಪುರುಷರನ್ನು ಮದುವೆಯಾಗಿ , ಹಿಂದೂ ಧರ್ಮಕ್ಕೆ ಮತಾಂತರವಾಗಿ : ಸಾಧ್ವಿ ಪ್ರಾಚಿ

Featured, ರಾಷ್ಟ್ರ ನ್ಯೂಸ್

ತ್ರಿವಳಿ ತಲಾಖ್ ಕುರಿತಾದಂತೆ ಕೇಂದ್ರ ಸರಕಾರವು ಹೊಸ ನಿಯಮಗಳನ್ನು ರೂಪಿಸಲು ಸಿದ್ಧವಾಗಿದೆ. ಇದೀಗ ಈ ಕುರಿತು ಮಾತನಾಡಿದ ವಿಶ್ವ ಹಿಂದೂ ಪರಿಷತ್ ನ ನಾಯಕಿ ಸಾಧ್ವಿ ಪ್ರಾಚಿ, ಮುಸ್ಲಿಮ್ ಮಹಿಳೆಯರು ತಮ್ಮ ಸಮುದಾಯದಲ್ಲಿರುವ ತ್ರಿವಳಿ ತಲಾಖ್, ನಿಕಾಹ್ ಹಲಾಲಾ ಸೇರಿದಂತೆ ಹಲವು ಪಿಡುಗುಗಳಿಂದ ಮುಕ್ತರಾಗಲು ಹಿಂದೂ ಪುರುಷರನ್ನು ಮದುವೆಯಾಗಿ ಹಿಂದೂ ಧರ್ಮಕ್ಕೆ ಮತಾಂತರವಾಗಿ ಎಂದು ಹೇಳಿಕೆ ನೀಡಿದ್ದಾರೆ.

ಮಥುರಾದಲ್ಲಿ ಮಾತನಾಡಿದ ಅವರು, ನಾನು ತ್ರಿವಳಿ ತಲಾಖ್‌ ವಿರುದ್ಧ ಹೋರಾಡು ತ್ತಿರುವ ನಿದಾ ಖಾನ್‌ ಸೇರಿದಂತೆ ಮುಸ್ಲಿಂ ಯುವತಿಯ ರನ್ನು ಭೇಟಿಯಾಗಿ ಹಿಂದೂ ಧರ್ಮಕ್ಕೆ ಬರುವಂತೆ ಕೇಳಿ ಕೊಳ್ಳುತ್ತೇನೆ ಎಂದಿದ್ದಾರೆ. ಇದಕ್ಕೂ ಮುನ್ನ, ಕಾಂಗ್ರೆಸ್‌ ಯಾವ ಕಾರಣಕ್ಕೂ ಗೆಲ್ಲುವುದಿಲ್ಲ. ಆ ಪಕ್ಷವು ರಾಹುಲ್‌ ಗಾಂಧಿಗೆ ಮದುವೆ ಮಾಡಿಸಲು ಮನಸ್ಸು ಮಾಡಲಿ ಎಂದೂ ಹೇಳಿದ್ದಾರೆ.