ತ್ವಿಶಾ ಶರ್ಮಾ ಪ್ರಕರಣ: ಪ್ರಮುಖ ಸಾಕ್ಷಿಯ ಮೇಲೆ ಪತಿ ಸ್ನೇಹಿತರಿಂದ ಹಲ್ಲೆ – vishwanews24

Featured, ರಾಷ್ಟ್ರ ನ್ಯೂಸ್

ತ್ವಿಶಾ ಶರ್ಮಾ ಪ್ರಕರಣ: ಪ್ರಮುಖ ಸಾಕ್ಷಿಯ ಮೇಲೆ ಪತಿ ಸ್ನೇಹಿತರಿಂದ ಹಲ್ಲೆ

ಭೋಪಾಲ್ : ನಟಿ ತ್ವಿಶಾ ಶರ್ಮಾ ಪ್ರಕರಣದ ಪ್ರಮುಖ ಸಾಕ್ಷಿಯ ಮೇಲೆ ಭೋಪಾಲ್‌ನಲ್ಲಿ ಆರೋಪಿ ಪತಿ ಸಮರ್ಥ್ ಸಿಂಗ್‌ನ ಸ್ನೇಹಿತರು ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸಮರ್ಥ್ ಸಿಂಗ್ ಮನೆ ಬಳಿ ಸಲೂನ್ ನಡೆಸುತ್ತಿರುವ ನೀರಜ್ ದುಬೆ ಅವರ ಮೇಲೆ ಮೇ 30 ರಂದು ಹಲ್ಲೆ ನಡೆದಿದೆ. ಹಲ್ಲೆ ನಡೆಸಿದ ದುಷ್ಕರ್ಮಿಗಳು ನ್ಯಾಯಾಲಯದಲ್ಲಿ ಸಾಕ್ಷಿ ಹೇಳದಂತೆ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನಾನು ಯಾವುದೇ ಸ್ಥಾನಮಾನ ಕೇಳಿಲ್ಲ, ಹೈಕಮಾಂಡ್ ಜವಾಬ್ದಾರಿ ವಹಿಸಿದರೆ ನಿಭಾಯಿಸುವೆ: ಯು.ಟಿ. ಖಾದರ್ – vishwanews24

ಇನ್ನು ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾದಲ್ಲಿ ವೈರಲ್ ಆಗಿದ್ದು, ಅದರಲ್ಲಿ ನೀರಜ್ ದುಬೆ ಅವರ ಸುತ್ತ ನಾಲ್ಕೈದು ಜನ ಸುತ್ತುವರಿದು ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಅವರು ತಮ್ಮನ್ನು ರಕ್ಷಿಸಿಕೊಳ್ಳಲು ಯತ್ನಿಸುತ್ತಿರುವುದು ಕಂಡುಬಂದಿದೆ.

ಘಟನೆ ನಡೆದ ಬೆನ್ನಲ್ಲೇ, ದುಬೆ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ಸಲ್ಲಿಸಿದ್ದಾರೆ. ನನಗೆ ಜೀವ ಭಯವಿದೆ. ರಕ್ಷಣೆ ನೀಡಬೇಕು ಎಂದು ಪೊಲೀಸರರಲ್ಲಿ ಕೇಳಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

Leave a Reply