ದ.ಕ , ಉಡುಪಿ ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಯಲ್ಲಿ ನಾವು ಖಾತೆ ತೆರೆಯುತ್ತೇವೆ : ಕುಮಾರಸ್ವಾಮಿ – Vishwanews24
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಕಾರ್ಯಕರ್ತರ ಕೊರತೆ ..
ಎರಡು ಜಿಲ್ಲೆ ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಯಲ್ಲಿ ನಾವು ಅಕೌಂಟ್ ಓಪನ್ ಮಾಡೇ ಮಾಡುತ್ತೇವೆ..
ಹಾಸನ: ರಾಜ್ಯದೆಲ್ಲೆಡೆ ಜೆಡಿಎಸ್ ಪರ ಬೆಂಬಲ ಕಾಣುತ್ತಿದ್ದು ಈ ಬಾರಿ ನಾವು ಎರಡು ಜಿಲ್ಲೆ ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಯಲ್ಲಿ ನಾವು ಅಕೌಂಟ್ ಓಪನ್ ಮಾಡೇ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ನ ಪಂಚರತ್ನ ಯಾತ್ರೆ ಹಾಸನ ಜಿಲ್ಲೆ ಅರಕಲಗೂಡು ಕ್ಷೇತ್ರದ ದೇವರಮುದ್ದನಹಳ್ಲಿ ಗ್ರಾಮಕ್ಕೆಪ್ರವೇಶ ಮಾಡಿದ್ದು ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇನ್ನೇನು ರಾಜ್ಯದಲ್ಲಿ ಚುನಾವಣೆಯ ನಡೆಯಲಿದೆ. ಈ ರಥಯಾತ್ರೆಯಲ್ಲಿ ಜನರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಯಲ್ಲಿ ನಾವು ಖಾತೆ ತೆರೆದೇ ತೆರೆಯುತ್ತೇವೆ. ಈ ಎರಡು ಜಿಲ್ಲೆಯಲ್ಲಿ ನಮಗೆ ಕಾರ್ಯಕರ್ತರ ಕೊರತೆ ಇದ್ದು ಇದನ್ನು ನಾವು ಒಪ್ಪಿಕೊಳ್ಳಲೇಬೇಕು ಎಂದು ಹೇಳಿದ್ದಾರೆ.
ಮಂಗಳೂರು: ಮಳಲಿ ಮಸೀದಿ ಜಾಗದಲ್ಲಿ ಮಂದಿರ ನಿರ್ಮಾಣ: ಹಿಂದೂ ಪರ ಸಂಘಟನೆಯಿಂದ ಗಣಹೋಮ – Vishwanews24
ಜನತೆಯ ಹಾದಿ ತಪ್ಪಿಸಲು ಎರಡೂ ರಾಷ್ಟ್ರೀಯ ಪಕ್ಷಗಳು ನಕಲಿ ಸಮೀಕ್ಷೆ ಮಾಡಿಸಿದ್ದಾರೆ. ಆದರೆ ನಿಜವಾದ ಅಂಕಿ ಅಂಶ ಬೇರೆಯೇ ಇದೆ. ಅದರಲ್ಲಿ ತಮ್ಮ ಸಂಖ್ಯೆ ಹೆಚ್ಚುಮಾಡಿಕೊಂಡು ಜನರಲ್ಲಿ ಗೊಂದಲ ಉಂಟುಮಾಡಿದ್ದಾರೆ ಎಂದು ದೂರಿದ್ದಾರೆ.
