ದ.ಕ. ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಅಭಿವೃದ್ಧಿಪಡಿಸುವುದು ಒಂದೇ ನನ್ನ ಗುರಿ : ನಳಿನ್ ಕುಮಾರ್ ಕಟೀಲ್ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು,: ನರೇಂದ್ರ ಮೋದಿಯವರ 5 ವರ್ಷದ ಉತ್ತಮ ಆಡಳಿತದಿಂದಾಗಿ ಜಿಲ್ಲೆಯ ಜನತೆ ನನಗೆ ಆಶೀರ್ವಾದ ಮಾಡಿದ್ದಾರೆ ಎಂದು ಭರ್ಜರಿ ಜಯಭೇರಿ ದಾಖಲಿಸಿರುವ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ವಿರುದ್ಧ ಅಭೂತ ಪೂರ್ವ ಗೆಲುವು ದಾಖಲಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಜಿಲ್ಲೆಯ ಏಳು ಶಾಸಕರ ಉತ್ತಮ ಕಾರ್ಯಗಳಿಂದಾಗಿ ನನ್ನ ಗೆಲುವು ಸುಲಭವಾಗಿದೆ. ರಾಜ್ಯ ಸರ್ಕಾರದ ವೈಫಲ್ಯ ಕೂಡ ನಮ್ಮ ಗೆಲುವಿಗೆ ಕಾರಣವಾಗಿದೆ. ಎಂದು ಅವರು ಹೇಳಿದ್ದಾರೆ.

ಇನ್ನು ಸಚಿವ ಸ್ಥಾನದ ನಿರೀಕ್ಷೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವುದೇ ಆಸೆ ಆಕಾಂಕ್ಷೆಗಳನ್ನು ಇಟ್ಟು ರಾಜಕಾರಣಕ್ಕೆ ಬಂದಿಲ್ಲ. ಆದರ್ಶದ ರಾಜಕಾರಣ ‌ಮಾಡಲು ಬಂದಿದ್ದೇನೆ. ದ.ಕ. ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ಅಭಿವೃದ್ಧಿಪಡಿಸುವುದು ಒಂದೇ ನನ್ನ ಇಚ್ಛೆ ಎಂಬುವುದಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.