ದ.ಕ ಲೋಕಸಭಾ ಕ್ಷೇತ್ರ ಚುನಾವಣೆ : ನಳಿನ್ ವಿರುದ್ಧ ಮಿಥುನ್ ರೈ ಕಣಕ್ಕೆ – Vishwanews24
ಮಂಗಳೂರು,: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಬಿಜೆಪಿ ತನ್ನ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತೆ ಕಣಕ್ಕಿಳಿಸಿದ್ದು ಕಾರ್ಯಕರ್ತ ಪಡೆಯೊಂದಿಗೆ ಇನ್ನೂ ಹೆಚ್ಚಿನ ಉತ್ಸಾಹದಿಂದ ಪ್ರಚಾರ ಕಾರ್ಯವನ್ನು ಆರಂಭಿಸಿದರು. ಇತ್ತ ಕಡೆ ನಳಿನ್ ಕುಮಾರ್ ವಿರುದ್ದ ಸ್ವರ್ಧಿಸಲು ಕಾಂಗ್ರೆಸ್ ಕೂಡಾ ರಣತಂತ್ರ ರೂಪಿಸಿದ್ದು ತನ್ನ ಅಭ್ಯರ್ಥಿಯಾಗಿ, ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ಅಧಿಕೃತ ಘೋಷಣೆಯಷ್ಟೇ ಬಾಕಿಯಾಗಿದೆ.
ಪಕ್ಷದ ಯುವ ನಾಯಕ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಅವರು ನಳಿನ್ ಎದುರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಆದರೆ ಮಾಜಿ ಸಚಿವ ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಬಿ. ರಮನಾಥ ರೈ ಅವರು ಮಿಥುನ್ ರೈ ಗೆ ಪ್ರಬಲ ಪೈಪೋಟಿ ನೀಡಿ ಕೊನೆಯ ವರೆಗೂ ಟಿಕೆಟಿಗಾಗಿ ದೆಹಲಿಯ ವರೆಗೂ ಲಾಭಿ ನಡೆಸಿದ್ದರು. ಆದರೆ ಬಿಜೆಪಿ ಹಾಲಿ ಸಂಸದ ನಳಿನ್ ಎದುರು ಸ್ಪರ್ಧಿಸಲು ಗಟ್ಟಿ ಗುಂಡಿಗೆಯ ಯುವ ನಾಯಕನ ಮನಗಂಡ ಕಾಂಗ್ರೆಸ್ ಹೈ ಕಮಾಂಡ್ ಮಿಥುನ್ ರೈ ಗೆ ಟಿಕೆಟ್ ನೀಡಿ ಕಣಕ್ಕಿಳಿಸಲು ಸಿದ್ದತೆ ನಡೆಸಿದೆ
ಒಟ್ಟಾರೆ ಈ ಬಾರಿ ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ ಇಬ್ಬರು ಬಿಸಿ ರಕ್ತದ ಯುವ ಅಭ್ಯರ್ಥಿಗಳ ಜಿದ್ದಾ ಜಿದ್ದಿನ ಕ್ಷೇತ್ರವಾಗಲಿರುವುದು ಮಾತ್ರ ಸತ್ಯ.
