ದಕ್ಷಿಣ ಕನ್ನಡ ಕಾಂಗ್ರೆಸ್ನಲ್ಲಿ ಟಿಕೆಟ್ಗೆ ಭಾರೀ ಪೈಪೋಟಿ ; ಅಚ್ಚರಿಯ ರೀತಿಯಲ್ಲಿ ಯುಟಿ ಖಾದರ್ ಹೆಸರು ಪ್ರಸ್ತಾಪ – Vishwanews24
ದಕ್ಷಿಣ ಕನ್ನಡ ಕಾಂಗ್ರೆಸ್ನಲ್ಲಿ ಟಿಕೆಟ್ಗೆ ಭಾರೀ ಪೈಪೋಟಿ ..
ಅಚ್ಚರಿಯ ರೀತಿಯಲ್ಲಿ ಯುಟಿ ಖಾದರ್ ಹೆಸರು ಪ್ರಸ್ತಾಪ..
ಲೋಕಸಭಾ ಅಖಾಡಕ್ಕಿಳಿಯುತ್ತಾರಾ ಯುಟಿ ಖಾದರ್..?
ಹಿಂದುತ್ವದ ಭದ್ರಕೋಟೆಯಲ್ಲಿ ಯುಟಿ ಖಾದರ್ಗೆ ಟಿಕೆಟ್ ನೀಡಲು ಕೆಪಿಸಿಸಿಯಲ್ಲಿ ಚರ್ಚೆ..
ಕರಾವಳಿ ಪ್ರದೇಶದಲ್ಲಿ ಖಾದರ್ ಮೂಲಕ ಮತ್ತೆ ಹಿಡಿತ ಸಾಧಿಸುವುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ..
ಮಂಗಳೂರು, : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಲ್ಲಿ ಪೈಪೋಟಿ ಮುಂದುವರಿದಿದ್ದು, ಅಚ್ಚರಿಯ ರೀತಿಯಲ್ಲಿ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಹೆಸರು ಪ್ರಸ್ತಾಪವಾಗಿದೆ. ಒಂದೆಡೆ ಕಾಂಗ್ರೆಸ್ ಮುಖಂಡರು ಜಾತಿ ಲೆಕ್ಕಾಚಾರ ಹಾಕುತ್ತಿದ್ದರೆ, ಮತ್ತೊಂದೆಡೆ ಖಾದರ್ ಹೆಸರು ಪ್ರಸ್ತಾಪವಾಗಿದೆ. ಹಿಂದುತ್ವದ ಭದ್ರಕೋಟೆಯಲ್ಲಿ ಯುಟಿ ಖಾದರ್ಗೆ ಟಿಕೆಟ್ ನೀಡಲು ಕೆಪಿಸಿಸಿಯಲ್ಲಿ ಚರ್ಚೆ ನಡೆದಿದೆ.
ಯುಟಿ ಖಾದರ್ ಅವರಿಗೆ ಮುಸ್ಲಿಂ ಮತಗಳಗಳನ್ನು ಕ್ಲೀನ್ ಸ್ವೀಪ್ ಮಾಡುವ ಸಾಮರ್ಥ್ಯ ಇದೆ. ಅದೇ ರೀತಿ ಹಿಂದು ಮತಗಳನ್ನೂ ಹೆಚ್ಚಾಗಿ ಸೆಳೆಯುವ ಶಕ್ತಿ ಇದೆ. ಇತ್ತೀಚಿಗೆ ಭೂತ ಕೋಲದಲ್ಲಿ ಭಾಗವಹಿಸಿ ಖಾದರ್ ಅವರು ಹಿಂದುಗಳ ಮನ ಗೆದ್ದಿದ್ದು ಕೂಡ ಇಲ್ಲಿ ಗಮನಾರ್ಹ. ಅದೇ ರೀತಿ ಖಾದರ್ ಹಲವು ಬಾರಿ ನಡೆದುಕೊಂಡಿದ್ದಾರೆ. ಹಿಂದೂ ದೇಗುಲಗಳಿಗೆ ಭೇಟಿ ನೀಡುವುದು, ಸಮಾರಂಭಗಳಲ್ಲಿ ಭಾಗವಹಿಸುವುದನ್ನು ಮಾಡಿದ್ದಾರೆ. ಜತೆಗೆ, ಅನೇಕ ಹಿಂದೂ ಮುಖಂಡರ ಜತೆಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇವೆಲ್ಲ ಅಂಶಗಳನ್ನೂ ಪರಿಗಣಿಸಲಾಗಿದೆ.
ಉಡುಪಿ: ಅಯೋಧ್ಯೆ ಬಾಲರಾಮನಿಗೆ ಶ್ರೀ ಕಾಶಿಮಠ ಸುವರ್ಣ ಪೀಠ ಪ್ರಭಾವಳಿ ಸಮರ್ಪಣೆ – Vishwanews24
ಜಾತ್ಯತೀತ ನಡೆಯಿಂದ ಖಾದರ್ ಅವರಿಗೆ ಎಲ್ಲ ರೀತಿಯ ಓಟ್ ಬ್ಯಾಂಕ್ ಸೆಳೆಯುವ ಶಕ್ತಿ ಇದೆ ಎಂಬುದು ಅವರ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಜತೆಗೆ, ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯವೂ ಕ್ಷೇತ್ರದ ಜನತೆಯಲ್ಲಿದೆ. ಹೀಗಾಗಿ ಅವರ ಮೂಲಕ ಕರಾವಳಿ ಪ್ರದೇಶದಲ್ಲಿ ಮತ್ತೆ ಹಿಡಿತ ಸಾಧಿಸುವುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ ಎನ್ನಲಾಗಿದೆ.
