ದಕ್ಷಿಣ ಕನ್ನಡ ಜಿಲ್ಲೆ: 87 ಎಚ್1ಎನ್1 ಪ್ರಕರಣ: ಮುಂಜಾಗ್ರತೆ ಅವಶ್ಯ: ಡಿಎಚ್ಒ – vishwanews24
ದಕ್ಷಿಣ ಕನ್ನಡ ಜಿಲ್ಲೆ: 87 ಎಚ್1ಎನ್1 ಪ್ರಕರಣ: ಮುಂಜಾಗ್ರತೆ ಅವಶ್ಯ: ಡಿಎಚ್ಒ
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಎಚ್1ಎನ್1 ನಿಯಂ ತ್ರಣದಲ್ಲಿದ್ದು, ಸಾರ್ವಜನಿಕರು ರೋಗ ಲಕ್ಷಣ ಕಂಡುಬಂದರೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳ ಬೇಕು. ಜಿಲ್ಲೆಯಲ್ಲಿ ಈವರೆಗೆ 87 ಎಚ್1ಎನ್1 ಪ್ರಕರಣ ದಾಖಲಾಗಿದೆ ಎಂದು ದ. ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಚ್. ಆರ್. ತಿಮ್ಮಯ್ಯ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದ. ಕ.ಜಿಲ್ಲೆಯಲ್ಲಿ 2026ರ ಜನವರಿಯಿಂದ- ಆಗಸ್ಟ್ 25ರ ವರೆಗೆ 87 ದೃಢೀಕೃತ ಇನ್ಫೂಯೆಂಜಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇನ್ಫೂಯೆಂಜಾ ಕಾಯಿಲೆ (ಐಎಲ್ಐ) ಮತ್ತು ತೀವ್ರ ಉಸಿರಾಟದ ಸೋಂಕು (ಸಾರಿ) ಪ್ರಕರಣ ಗುರುತಿಸಲು ಜಿಲ್ಲಾಸ್ಪತ್ರೆಗಳು, ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಮತ್ತು ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಕಣ್ಣಾವಲು ಕೇಂದ್ರಗಳಾಗಿ ಗುರುತಿಸಲಾಗಿದೆ ಎಂದರು.
ನವೆಂಬರ್ ಮೊದಲ ವಾರದಲ್ಲಿ ಉಡುಪಿ ನಗರಕ್ಕೆ ಪೈಪ್ಲೈನ್ ಮೂಲಕ ಮನೆ ಮನೆಗೆ ಗ್ಯಾಸ್ ಪೂರೈಕೆ – vishwanews24
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ನವೀನ್ಚಂದ್ರ ಕುಲಾಲ್ ಮಾತನಾಡಿ, ಸೋಂಕು ತಡೆಗಟ್ಟಲು ಮುನ್ನೆಚ್ಚರಿಕೆ ಅವಶ್ಯ. ಸೀನುವಾಗ ಮತ್ತು ಕೆಮ್ಮುವಾಗ ಮೂಗು, ಬಾಯಿಯನ್ನು ಕರವಸ್ತ್ರ ದಿಂದ ಮುಚ್ಚಿಕೊಳ್ಳಬೇಕು. ಸಾಬೂನು, ನೀರಿನಿಂದ ಕೈಗಳನ್ನು ನಿಯಮಿತವಾಗಿ ತೊಳೆಯಬೇಕು, ಕಣ್ಣು, ಮೂಗು, ಬಾಯಿಯನ್ನು ಪದೇಪದೆ ಮುಟ್ಟ ಬಾರದು. ಇನ್ಫೂಯೆಂಜಾ ಸಂಬಂಧಿತ ರೋಗ ಲಕ್ಷಣ ಕಂಡುಬಂದಲ್ಲಿ ಸಮೀಪದ ಸರಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ವೈದ್ಯಕೀಯ ಸಲಹೆ ಪಡೆಯಬೇಕು ಎಂದರು.
ದ.ಕ. ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಡೆಂಗ್ಯೂ ಪ್ರಕರಣದಲ್ಲಿ ಇಳಿಕೆ ಕಾಣುತ್ತಿದೆ. ಜುಲೈ ಅಂತ್ಯದವರೆಗೆ 2026ರಲ್ಲಿ ಈವರೆಗೆ 35 ಪ್ರಕರಣ ದಾಖಲಾಗಿದೆ. ಇದಕ್ಕಿದ್ದಂತೆ ತೀವ್ರಜ್ವರ, ವಿಪರೀತ ತಲೆನೋವು, ಕಣ್ಣಿನ ಹಿಂಭಾಗದ ನೋವು, ಮಾಂಸಖಂಡ, ಕೀಲುಗಳಲ್ಲಿ ವಿಪರೀತ ನೋವು, ವಾಕರಿಕೆ, ವಾಂತಿ ಡೆಂಗ್ಯೂ ಲಕ್ಷಣವಾಗಿದೆ ಎಂದರು.
