ದಕ್ಷಿಣ ಕನ್ನಡದ ಜನ ಹೀಗೇಕೆ ಮಾಡ್ತಾರೆ ? ನಿಮ್ಮ ಊರಿನವರು ಕೋಮುವಾದಿಗಳು ಅಂತ ನನ್ನನ್ನು ಕೇಳುತ್ತಾರೆ,ನನಗೆ ತಲೆತಗ್ಗಿಸುವ ಪರಿಸ್ಥಿತಿ ಉಂಟಾಗಿದೆ: ಪ್ರಕಾಶ್ ರೈ
ಮಂಗಳೂರು:” ನನ್ನ ಹೇಳಿಕೆಯನ್ನು ಸದಾ ತಿರುಚಲಾಗುತ್ತದೆ,ನಾನು ರಾಜಕೀಯ ಪಕ್ಷದಿಂದ ಬೆಳೆದಿಲ್ಲ,ರಾಜಕೀಯದಲ್ಲಿ ಆತಂಕದ ವಾತಾವರಣ ಇದೆ,ನಾನು ಆಳುವ ಪಕ್ಷದ ವಿರೋಧಿಯಾಗಿದ್ದೇನೆ,ಒಬ್ಬ ಪ್ರಜೆ, ಪ್ರಜೆಯಾಗಿರೋದಕ್ಕೆ ಸಾಧ್ಯವಾಗುತ್ತಿಲ್ಲ,ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ#JustAsking ಅಭಿಯಾನ ನಿರಂತರವಾಗಿರುತ್ತದೆ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.ಅವರು ಇಂದು ಮಂಗಳೂರಿನ ಪ್ರೆಸ್ ಕ್ಲಬಿನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಹೇಳಿದರು.
ಪಬ್ ದಾಳಿ ಆರೋಪಿಗಳಿಗೆ ಕೋರ್ಟ್ ಖುಲಾಸೆ
ಮಂಗಳೂರಿನಲ್ಲಿ ಘಟಿಸಿದ ಪಬ್ ದಾಳಿಯ ವಿಚಾರದಲ್ಲಿ ಕೋರ್ಟ್ ಸಾಕ್ಷಧಾರ ಇಲ್ಲ ಅಂತ ಹೇಳಿದೆ.ಕಾರ್ಯಕರ್ತರು ಹೊಡೆದಿರುವ ವಿಡಿಯೋ ಕೂಡಾ ಇದೆ.ಕೋರ್ಟ್ ಆಜ್ಞೆ ಜನಸಾಮಾನ್ಯರನ್ನು ಗೊಂದಲ ಮಾಡಿದೆ. ಕೋರ್ಟ್ ಆರ್ಡರ್ ಕೊಟ್ಟಿದ್ದು ನ್ಯಾಯನಾ? ಆಡಳಿತರೂಢ ಕಾಂಗ್ರೆಸ್ ಇದರ ಬಗ್ಗೆ ಪ್ರಶ್ನೆ ಮಾಡಬಹುದಿತ್ತು,ಪ್ರಶ್ನೆ ಮಾಡಿದ್ರೆ ವಿರೋಧಿಯಾಗ್ತಿವಿ ಎಂಬ ಭಯ ಇದೆ,ಕಾಂಗ್ರೆಸ್ ರಾಜಕೀಯ ಪ್ರದರ್ಶನ ಮಾಡುತ್ತಿದೆ ಎಂದು ಬಹುಭಾಷ ನಟ ಪ್ರಕಾಶ್ ರೈ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸೊಂಟದ ಕೆಳಗಿನ ಭಾಷೆ
ನಾನು ಯಾವುದೇ ಚುನಾವಣಾ ಪ್ರಚಾರಕ್ಕೆ ಹೋಗಲ್ಲ,ಆದರೆ ಕೆಲ ಪಕ್ಷಗಳ ವಿರುದ್ದ ಮಾತನಾಡುತ್ತೇನೆ ಬಿಜೆಪಿ ಕೋಮುವಾದ ದ ಬಗ್ಗೆ ಮಾತನಾಡ್ತೇನೆ ಬಿಜೆಪಿ ಕೋಮುವಾದ ದೇಶದ ಸಾಮರಸ್ಯ ಹಾಳು ಮಾಡುತ್ತೆ ಸಂಸದ ಪ್ರತಾಪ್ ಸಿಂಹ ಬಗ್ಗೆ ನನಗೆ ದ್ವೇಷ ಇಲ್ಲ ಪ್ರತಾಪ್ ಸಿಂಹ ಮುಖವಾಡ ಹಾಕಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ ಸೊಂಟದ ಕೆಳಗಿನ ಭಾಷೆ ಬಳಕೆ ಮಾಡ್ತಾರೆ,ನಾನು ಒಬ್ಬ ಪ್ರಜೆಯಾಗಿ ಪ್ರತಾಪ್ ಸಿಂಹ ವಿರುದ್ದ ಕೇಸ್ ಹಾಕಿದ್ದೇನೆ ಎಂದು ಅವರು ಪ್ರತಾಪ್ ಸಿಂಹ ವಿರುದ್ದ ಕಿಡಿ ಕಾರಿದ್ದಾರೆ.
ನಿಮ್ಮ ಊರಿನವರು ಕೋಮುವಾದಿಗಳು
ಒಬ್ಬ ಮುಸ್ಲಿಮನ ಕೊಲೆಯಾದ್ರೆ ಇನ್ನೊಬ್ಬ ಹಿಂದುವಿನ ಕೊಲೆ ಮಾಡ್ತಾರೆ,ಕೊಲೆಯ ಬಳಿಕ ಎರಡೂ ಕಡೆಯವರನ್ನು ಬಂಧಿಸಲಾಗುತ್ತೆ.ಬಂಧಿತರ ಮನೆಯವರು ಅನಂತರ ನಾಲ್ಕು ವರ್ಷ ಜೈಲು ಕಾಯುತ್ತಾರೆ,ಆದರೆ ಇದಕ್ಕೆ ಕಾರಣವಾದವರು ಹಾಯಾಗಿರ್ತಾರೆ,ದಕ್ಷಿಣ ಕನ್ನಡದ ಜನ ಹೀಗೇಕೆ ಮಾಡ್ತಾರೆ ಅನ್ನೋದು ಪ್ರಶ್ನೆ, ನಿಮ್ಮ ಊರಿನವರು ಕೋಮುವಾದಿಗಳು ಅಂತ ನನ್ನನ್ನು ಕೇಳುತ್ತಾರೆ,ನನಗೆ ತಲೆತಗ್ಗಿಸುವ ಪರಿಸ್ಥಿತಿ ಉಂಟಾಗಿದೆಎಂದು ಪ್ರಕಾಶ್ ರೈ ಹೇಳಿದರು.
ಬಂಡಲ್ ಷಾ ?
ಪುತ್ತೂರಿನ ಕಾಲೇಜಿನಲ್ಲಿ ಅಮಿತ್ ಷಾನನ್ನು ಟೀಕಿಸಿದ್ರೆ ಸಸ್ಪೆಂಡ್ ಮಾಡ್ತಾರೆ,ಹಾಗಾದ್ರೆ ಬಂಡಲ್ ಷಾ ಅಂತ ಪ್ರಶ್ನೆ ಮಾಡೋಕೆ ರೈಟ್ಸ್ ಇಲ್ಲವೇ? ಪ್ರಶ್ನಿಸುವುದು ವಿದ್ಯಾರ್ಥಿಯ ಹಕ್ಕು ಯಾಕಲ್ಲ ? ಎಂದು ಅವರು ಪ್ರಶ್ನೆ ಮಾಡಿದರು.
