ದಕ್ಷಿಣಕನ್ನಡ : ‘ಆಟೋ ರಿಕ್ಷಾ’ಗಳಿಗೆ ಹೊಸ ರೂಲ್ಸ್ ಜಾರಿ :ಫೆ. 20ರೊಳಗೆ ರಿಕ್ಷಾಗಳ ಬಣ್ಣ ಬದಲಾಯಿಸಲು ಸೂಚನೆ – VIshwanews24
ದಕ್ಷಿಣಕನ್ನಡ : ‘ಆಟೋ ರಿಕ್ಷಾ’ಗಳಿಗೆ ಹೊಸ ರೂಲ್ಸ್ ಜಾರಿ :ಫೆ. 20ರೊಳಗೆ ರಿಕ್ಷಾಗಳ ಬಣ್ಣ ಬದಲಾಯಿಸಲು ಸೂಚನೆ
ದಕ್ಷಿಣಕನ್ನಡ : ಜಿಲ್ಲೆಯಾದ್ಯಂತ ಸಂಚರಿಸುವ ಆಟೋ ರಿಕ್ಷಾಗಳಿಗೆ ಹೊಸ ರೂಲ್ಸ್ ಜಾರಿಯಾಗಿದ್ದು, ಫೆ. 20ರೊಳಗೆ ರಿಕ್ಷಾ ಗಳ ಬಣ್ಣ ಬದಲಾಯಿಸಲು ಸೂಚನೆ ನೀಡಲಾಗಿದೆ.
ಎಲ್ಲ ವಿಧದ ಆಟೋ ರಿಕ್ಷಾಗಳಿಗೆ (ಇ-ಆಟೋ ರಿಕ್ಷಾಗಳು ಒಳಗೊಂಡಂತೆ) ಮೆಥನಾಲ್ ಮತ್ತು ಇಥನಾಲ್ ಇಂಧನ ಬಳಸಿ ಸಂಚರಿಸುವ ಆಟೋರಿಕ್ಷಾ ಒಳಗೊಂಡಂತೆ ಆಟೋ ರಿಕ್ಷಾದ ಮಧ್ಯ ಭಾಗ ದಿಂದ ಕೆಳಗಡೆ ಕಪ್ಪು ಬಣ್ಣವನ್ನು ಪೂರ್ತಿಯಾಗಿ ಬಳಿಯಬೇಕು.
ಉಡುಪಿ : ಮಿತ್ರ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಶ್ರೀಧರ ಹೊಳ್ಳ ನಿಧನ – Vishwanews24
ಆಟೋ ರಿಕ್ಷಾದ ಮಧ್ಯ ಭಾಗದಿಂದ ಮೇಲೆ ಹಳದಿ ಬಣ್ಣವನ್ನು ಬಳಿಯಬೇಕು. ಇದು ವಲಯ 1 ಮತ್ತು ವಲಯ 2 ಕ್ಕೂ ಅನ್ವಯವಾಗುತ್ತದೆ.
ವಲಯ 1ಕ್ಕೆ ಚೌಕಾಕೃತಿ ಆಕಾರದ ಆಕಾಶ ನೀಲಿ ಬಣ್ಣ, ವಲಯ 2ಕ್ಕೆ ವೃತ್ತಾಕಾರದ ಹಳದಿ ಬಣ್ಣದ ಸ್ಟಿಕ್ಕರ್/ಗುರುತಿನ ಸಂಖ್ಯೆಯನ್ನು ಪೊಲೀಸ್ ಇಲಾಖಾ ವತಿಯಿಂದ ಪಡೆದು ಅಂಟಿಸಿಕೊಳ್ಳಬೇಕು. ಫೆ. 20 ಕೊನೆಯ ದಿನವಾಗಿದೆ ಎಂದು ಎಲ್ಲಾ ಆಟೋ ಚಾಲಕರಿಗೆ ಎಚ್ಚರಿಕೆಯನ್ನು ನೀಡಲಾಗಿದೆ.
ಕಾರ್ಕಳ :ಜ.27 ರಂದು ಪರಶುರಾಮ ಥೀಂ ಪಾರ್ಕ್ ಲೋಕಾರ್ಪಣೆ – Vishwanews24
