ದಕ್ಷಿಣಕನ್ನಡ :  ಪ್ರವೀಣ್‌ ನೆಟ್ಟಾರು ಕೊಲೆಯ ಪ್ರಮುಖ ಆರೋಪಿಗಳು ಸೌದಿಯಲ್ಲಿ ಪತ್ತೆ , ಹಂತಕರನ್ನು ಬಂಧಿಸಲು ಎನ್​ಐಎ ಮಾಸ್ಟರ್ ಪ್ಲ್ಯಾನ್​​ – Vishwanews24

Featured, ದಕ್ಷಿಣ ಕನ್ನಡ

ದಕ್ಷಿಣಕನ್ನಡ :  ಪ್ರವೀಣ್‌ ನೆಟ್ಟಾರು ಕೊಲೆಯ ಪ್ರಮುಖ ಆರೋಪಿಗಳು ಸೌದಿಯಲ್ಲಿ ಪತ್ತೆ , ಹಂತಕರನ್ನು ಬಂಧಿಸಲು ಎನ್​ಐಎ ಮಾಸ್ಟರ್ ಪ್ಲ್ಯಾನ್​​

ದಕ್ಷಿಣಕನ್ನಡ : ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಪ್ರವೀಣ್‌ ನೆಟ್ಟಾರು ಕೊಲೆಯ ಪ್ರಮುಖ ಹಂತಕರು ಸೌದಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಎನ್‌ಐಎ ಚಾರ್ಜ್​ಶೀಟ್​ನಲ್ಲಿ ವರದಿ ಬಹಿರಂಗವಾಗಿದೆ.

ದಕ್ಷಿಣ ಕನ್ನಡ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಪ್ರವೀಣ್ ನೆಟ್ಟಾರು ಅವರನನ್ನು ಜುಲೈ 26 ರಂದು ಬೆಳ್ಳಾರೆಯಲ್ಲಿರವ ಅವರ ಕೋಳಿ ಅಂಗಡಿ ಬಳಿಯೇ ಹಂತಕರು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಈ ಪ್ರಕರಣವನ್ನು ಎನ್​ಐಎ ತನಿಖೆಗೆ ವಹಿಸಿತ್ತು.

ಮಂಗಳೂರು : ಕೆಲಸದ ವೇಳೆ ಮೇಲ್ಛಾವಣೆಯಿಂದ ಕೆಳಗೆ ಬಿದ್ದು ಯುವಕ ಸಾವು – Vishwanews24

ಎನ್‌ಐಎ ಸಲ್ಲಿಸಿದ್ದ ಚಾರ್ಜ್​ಶೀಟ್​ನಲ್ಲಿ ಹಲವು ವಿಚಾರ ಪ್ರಸ್ತಾಪಿಸಲಾಗಿದ್ದು,ಪ್ರಮುಖ ಆರೋಪಿಗಳಾದ ಮೊಹಮ್ಮದ್ ಶರೀಫ್​, ಕೆ.ಎ.ಮಸೂದ್​ ಎಂಬ ಇಬ್ಬರು ಪ್ರಮುಖ ಆರೋಪಿಗಳು ಸೌದಿ ಅರೇಬಿಯಾದಲ್ಲಿ ಕಂಡು ಬಂದಿದ್ದು ಮೊಹಮ್ಮದ್​ ಮುಸ್ತಫಾ, ಎಂ.ಹೆಚ್​.ತುಫೈಲ್​​, ಎಂ.ಆರ್​.ಉಮರ್​ ಫಾರೂಕ್​, ಅಬೂಬಕರ್​​ ಸಿದ್ಧಿಕಿ ಎಂಬುವವರು ಅರಬ್​ ದೇಶದಲ್ಲಿ ಪತ್ತೆಯಾಗಿದ್ದಾರೆ.

ಸೌದಿಯಲ್ಲಿ ಆರೋಪಿಗಳನ್ನು ಬಂಧಿಸಲು ಎನ್‌ಐಎ ಭಾರೀ ಪ್ಲ್ಯಾನ್‌ ಮಾಡಿದ್ದಾರೆ. ಆರೋಪಿಗಳು ಸೌದಿಯಲ್ಲಿ ಸೈಟ್ ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಈ 6 ಆರೋಪಿಗಳ ಸುಳಿವಿಗೆ ಒಟ್ಟು 24 ಲಕ್ಷ ಬಹುಮಾನ ಘೋಷಣೆ‌ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ಪತ್ತೆಯಾದ ಹಂತರನ್ನು ಗಲ್ಲಿಗೇರಿಸುತ್ತಾರಾ ಅನ್ನೋದನ್ನು ಕಾದುನೋಡಬೇಕಾಗಿದೆ.

ಕುಂದಾಪುರ: ಬಸ್ ನಿಂದ ಇಳಿಯುತ್ತಿದ್ದಾಗ ಆಯತಪ್ಪಿ ಚಕ್ರದಡಿ ಸಿಲುಕಿ ವಿದ್ಯಾರ್ಥಿ ದಾರುಣ ಸಾವು – Vishwanews24

ಪ್ರವೀಣ್ ನೆಟ್ಟಾರನ್ನು ಬಲಿ ತೆಗೆಯಲು ನಿರ್ಧರಿಸಿದ್ದ ಹಂತಕರ ತಂಡ 3 ಬಾರಿ ಸ್ಕೆಚ್ ಹಾಕಿತ್ತು. ಜುಲೈ 26 ರಂದು ಏಕಾಏಕಿ ಪ್ರವೀಣ್ ತಲೆ ಮೇಲೆ ತಲವಾರು ಬೀಸಿ ಹತ್ಯೆ ಮಾಡಿದ್ದಾರೆ. ಬೈಕ್ ಮೂಲಕ ಬಂದಿದ್ದ ಮೂವರ ತಂಡ ಈ ಕೃತ್ಯ ನಡೆಸಿತ್ತು. ಕೊಲೆಯಾದ ಬೆನ್ನಲ್ಲೆ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

Leave a Reply