ದಿಢೀರ್ ವರ್ಗಾವಣೆಗೊಂಡ ಕಾಪು ಪುರಸಭೆಯ ಮುಖ್ಯ ಅಧಿಕಾರಿ ರಾಯಪ್ಪ………….
ಕಾಪು : ಚುನಾವಣಾ ಹಿನ್ನಲೆಯಲ್ಲಿ ಕಾಪು ಪುರಸಭೆಯ ದಷ್ಟ ನಿಷ್ಟ ಅಧಿಕಾರಿಯೆಂದು ಹೆಸರು ಪಡೆದಿರುವ ಖಡಕ್ ಅಧಿಕಾರಿ ರಾಯಪ್ಪನವರಿಗೆ ಮೂಡಬಿದ್ರೆಗೆ ವರ್ಗಾವಣೆಯಾಗಿದೆ. ಈ ವರ್ಗಾವಣೆಯನ್ನು ಚುನಾವಣೆ ಹಿನ್ನಲೆಯ ವರ್ಗಾವಣೆ ಎಂದು ಹೇಳಲಾಗುತ್ತಿದೆ. ಆದರೆ ಕಾಪು ಪುರಸಭೆ ವ್ಯಾಪ್ತಿಯಲ್ಲಿ ಸ್ಚಚ್ಛತೆ ವಿಚಾರದಲ್ಲಿ ಸಾಕಷ್ಟು ಹೆಸರನ್ನು ಪಡೆದಿದ್ದ ರಾಯಪ್ಪ ದಿಢೀರ್ ವರ್ಗಾವಣೆಯಾಗಿರುವುದು ಪುರಸಭೆಯ ವ್ಯಾಪ್ತಿಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಘನತ್ಯಾಜ್ಯ ನಿರ್ವಹಣೆಯಲ್ಲಿ ಕಾಪು ಪುರಸಭೆಗೆ ರಾಜ್ಯ ಮಟ್ಟದ ದ್ವಿತಿಯ ಸ್ಥಾನ ಲಭಿಸುವಲ್ಲಿ ಮುಖ್ಯಧಿಕಾರಿ ರಾಯಪ್ಪ ಅವರ ಪಾತ್ರವನ್ನು ಇಲ್ಲಿ ನೆನಪಿಸಬಹುದು.
