ದಿನೇಶ್ ಗುಂಡೂರಾವ್‍ಗೆ ಚುನಾವಣೆ ಸೋಲು ಗೆಲುವಿನ ಅರ್ಥ ಹೇಳಿಕೊಟ್ಟ ಪ್ರತಾಪ್ ಸಿಂಹ…! ವೈರಲ್ ಆಯ್ತು ಈ ಟ್ವೀಟ್

ಉಡುಪಿ

ಬೆಂಗಳೂರು: ಇಂದು ಕರ್ನಾಟಕ ಲೋಕಸಭಾ ಮತ್ತು ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಟ್ವಿಟ್ಟರಿನಲ್ಲಿ ಕರ್ನಾಟಕದ ಜನು ಬಿಜೆಪಿಯ ನೆಗೆಟಿವ್ ಸರ್ಕಾರವನ್ನು ತಿರಸ್ಕರಿಸಿದೆ ಎನ್ನುವ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಅವರಿಗೆ ರೀ-ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಸದ್ದು ಮಾಡುತ್ತಿದೆ. 4-1 ಗೆಲುವು ಸಾಧಿಸಿ ಬಿಜೆಪಿಯನ್ನು ಹೊಡೆದು ಕಳುಹಿಸಿದೆ. ಕರ್ನಾಟಕದ ಜನರು ಬಿಜೆಪಿಯ ನೆಗೆಟಿವ್ ಸರ್ಕಾರವನ್ನು ತಿರಸ್ಕರಿಸಿದೆ. ಜನರ ಸಮಸ್ಯೆ ಬಗೆ ಹರಿಸುವುದರಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಎಲ್ಲ ವಿಜೇತರಿಗೆ ನನ್ನ ಅಭಿನಂದನೆಗಳು ಎಂದು ಎಂದು ದಿನೇಶ್ ಗುಂಡುರಾವ್ ಟ್ವೀಟ್ ಮಾಡಿದ್ದರು.

ಈ ಟ್ವೀಟ್‍ಗೆ ಸಂಸದ ಪ್ರತಾಪ್ ಸಿಂಹ ರೀ-ಟ್ವೀಟ್ ಮಾಡಿ, “ಮೊದಲು ಸತ್ಯವನ್ನು ತಿಳಿದುಕೊಳ್ಳಿ. 4-1ರ ಗೆಲುವು ಅಲ್ಲ ಅದು 1-1ರ ಗೆಲುವು. ನಾವು ಬಳ್ಳಾರಿಯಲ್ಲಿ ಸೋತಿದ್ದರೂ ಶಿವಮೊಗ್ಗವನ್ನು ಉಳಿಸಿಕೊಂಡಿದ್ದೇವೆ. ನೀವು ಬಳ್ಳಾರಿಯನ್ನು ಗೆದ್ದುಕೊಂಡು ಜಮಖಂಡಿಯನ್ನು ಉಳಿಸಿಕೊಂಡಿದ್ದೀರಿ. ಜೆಡಿಎಸ್ ರಾಮನಗರ, ಮಂಡ್ಯವನ್ನು ಗೆದ್ದುಕೊಂಡರೂ ಶಿವಮೊಗ್ಗದಲ್ಲಿ ವಿಫಲವಾಗಿದೆ. ಆದರೆ ಈ ಸಂಭ್ರಮಕ್ಕೆ ಮೊದಲು ನಂಜನಗೂಡು ಮತ್ತು ಗುಂಡ್ಲುಪೇಟೆಯನ್ನು ಮರೆಯಬೇಡಿ ಎಂದು ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದಾರೆ.

ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಉಗ್ರಪ್ಪ, ಶಿವಮೊಗ್ಗದಲ್ಲಿ ರಾಘವೇಂದ್ರ, ಮಂಡ್ಯದಲ್ಲಿ ಶಿವರಾಮೇಗೌಡ ಜಯಗಳಿಸಿದ್ದಾರೆ. ವಿಧಾನಸಭಾ ಉಪಚುನಾವಣೆ ನಡೆದ ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ, ಜಮಖಂಡಿಯಲ್ಲಿ ಆನಂದ್ ನ್ಯಾಮಗೌಡ ಗೆದ್ದಿದ್ದಾರೆ.