ದೀಪಾವಳಿ ಹಬ್ಬದ ಪ್ರಯುಕ್ತ ಉಂಡಾರುವಿನಲ್ಲಿ ಜೋಡು ಬಂಟರ ನರ್ತನ ಸೇವೆ: Video -Vishwanews24

Featured, ಉಡುಪಿ

ದೀಪಾವಳಿ ಪ್ರಯುಕ್ತ ಉಂಡಾರುವಿನಲ್ಲಿ ಜೋಡು ಬಂಟರ ನರ್ತನ ಸೇವೆ.

ಕಾಪು: ಹಿಂದುಗಳ ಪವಿತ್ರ ದೀಪಗಳ ಹಬ್ಬ ದೀಪಾವಳಿಯ ಪ್ರಯುಕ್ತ ಪ್ರತಿ ವರ್ಷವೂ ನಡೆಯುವ ಸಂಪ್ರದಾಯತೆ ಜೋಡು ಬಂಟರ ನರ್ತನ‌ ಸೇವೆಯು ಆದಿತ್ಯವಾರದ ನಸುಕಿನ‌ ಜಾವ ಐದು ಗಂಟೆಗೆ ನಡೆಯಲಿದೆ.

ಕಾಪು ಉಂಡಾರು ವಿಷ್ಣುಮೂರ್ತಿ ದೇಗುಲದಿಂದ ಸಾಂಪ್ರದಾಯಿಕ ಮೆರವಣಿಗೆ ಮುಖಾಂತರ ಸಾಗಿ ಗೋಳಿಕಟ್ಟೆ ಶ್ರೀ ವಿಠೋಭ ಭಜನಾ ಮಂದಿರದವರೆಗೆ ಸಾಗಿ ಮುಳ್ಳಿನ‌ ರಾಶಿ (ಮುಳ್ಳಮುಟ್ಟೆ) ಗೆ ಬೆಂಕಿ ನೀಡುವ ಮೂಲಕ‌ ಸಮಾಪನ ಗೊಳ್ಳಲಿದೆ.

ಈ‌ ಕಾರ್ಯಕ್ರಮದಲ್ಲಿ ಊರಿನ‌ ಪರ ಊರಿನ ಗ್ರಾಮಸ್ಥರು ಭಾಗವಹಿಸುವಂತೆ ಪ್ರಕಟನೆ ತಿಳಿಸಿದೆ.