ದೀಪಾವಳಿಯ ಬಂಪರ್ ಧಮಾಕ : 600 ಉದ್ಯೋಗಿಗಳಿಗೆ ಕಾರ್ ವಿತರಿಸಿದ ಸೂರತ್ ವಜ್ರದ ವ್ಯಾಪಾರಿ

Featured, ರಾಷ್ಟ್ರ ನ್ಯೂಸ್

ಸೂರತ್: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಹಾಗೂ ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಸೂರತ್‌ನ ವಜ್ರದ ವ್ಯಾಪಾರಿಯಾಗಿರುವ ಸಾವ್ಜಿ ಡೋಲಾಕಿಯಾ ಅವರು, ತಮ್ಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ದೀಪಾವಳಿ ಪ್ರಯುಕ್ತ ಭರ್ಜರಿ ಉಡುಗೊರೆ ನೀಡಿದ್ದಾರೆ.

ಈತ ತನ್ನ ಕಂಪನಿಯ 600 ಉದ್ಯೋಗಿಗಳಿಗೆ ಈ ವರ್ಷದ ದೀಪಾವಳಿ ಉಡುಗೊರೆಯನ್ನಾಗಿ ಕಾರುಗಳನ್ನು ನೀಡುತ್ತಿದ್ದು, ಇನ್ನಿತರ ಉದ್ಯೋಗಿಗಳಿಗೆ ಫ್ಲ್ಯಾಟ್​ ಮತ್ತು ಆಭರಣಗಳನ್ನು ಗಿಫ್ಟ್​ ಆಗಿ ನೀಡಲಿದ್ದಾರೆ.

ತಮ್ಮ ಕಂಪನಿಯಲ್ಲಿ 25 ವರ್ಷ ಸೇವೆ ಸಲ್ಲಿಸಿದ ಮೂವರು ಉದ್ಯೋಗಿಗಳಿಗೆ ಧೋಲಾಕಿಯಾ ಅವರು ಕಳೆದ ಆಗಸ್ಟ್​ ತಿಂಗಳಲ್ಲಿ 3 ಕೋಟಿ ರೂ. ಮೌಲ್ಯದ ಮೂರು ಮರ್ಸಿಡಿಸ್-ಬೆನ್ಜ್ ಜಿಎಲ್​ಎಸ್​ ಕಾರನ್ನು ಉಡುಗೊರೆಯನ್ನಾಗಿ ನೀಡಿದ್ದರು.

ದೀಪಾವಳಿ ಉಡುಗೊರೆಯಿಂದ ಎಲ್ಲರಿಗೂ ಪರಿಚಿತರಾಗಿರುವ ಪರೋಪಕಾರಿ ಧೋಲಾಕಿಯಾ ಅವರು ಹಿಂದೆ ತನ್ನ ಉದ್ಯೋಗಿಗಳಿಗೆ ತಿಂಗಳ ಕಂತಿನಲ್ಲಿ ಸಾವಿರಾರು ಕಾರು ಹಾಗೂ ಫ್ಲ್ಯಾಟ್​ಗಳನ್ನು ನೀಡಿದ್ದರು.

ದೀಪಾವಳಿಯ ದುಬಾರಿ ಬೋನಸ್​ ಹಾಗೂ ಉಡುಗೊರೆ ಹರೇ ಕೃಷ್ಣ ಎಕ್ಸ್​ಪೋರ್ಟ್ಸ್​ ಕಂಪನಿಯ ವಾರ್ಷಿಕ ಆಚರಣೆಯಾಗಿದೆ.