ದುಡ್ಡಿಗೋಸ್ಕರ ನಾನು ಬೆಳಗಾವಿಯಿಂದ ಕಾರ್ಕಳಕ್ಕೆ ಬರಬೇಕಾಗಿಲ್ಲ : ಸುನಿಲ್ ಕುಮಾರ್ ಗೆ ಮುತಾಲಿಕ್ ತಿರುಗೇಟು – Vishwanews24
ನಾನು ನಿಮ್ಮ ತರ ಆಸ್ತಿ ಬ್ಯಾಂಕ್ ಬ್ಯಾಲೆನ್ಸ್, ಬೇನಾಮಿ ಜಮೀನು ಮಾಡಿದ್ದರೆ ಹಣ ಕೇಳುತ್ತಿರಲಿಲ್ಲ..
ಭ್ರಷ್ಟಾಚಾರ ವಿರುದ್ಧ ಹೋರಾಡಲು ಅಸಲಿ ಹಿಂದುತ್ವ ತೋರಿಸಿ ಕೊಡಲು ಮತದ ಜೊತೆ ಮತದಾರರಿಂದ ನೂರು ರೂಪಾಯಿ ಕೇಳುತ್ತಿದ್ದೇನೆ : ಮುತಾಲಿಕ್
ಕಾರ್ಕಳ: ಮತದಾರರಲ್ಲಿ ಓಟಿನ ಜೊತೆಗೆ ನೋಟು ನೀಡಿ ಎಂದು ಚುನಾವಣೆಯ ಖರ್ಚಿಗೆ ಜನರಿಂದ ಹಣ ಕೇಳಿರುವ ಪ್ರಮೋದ್ ಮುತಾಲಿಕ್ ಅವರಿಗೆ ಹಣ ಮಾಡಲು ಕಾರ್ಕಳಕ್ಕೆ ಬಂದಿದ್ದ ಎಂದು ಪ್ರಶ್ನಿಸಿರುವ ಸುನಿಲ್ ಕುಮಾರ್ ಅವರ ಪ್ರಶ್ನೆಗೆ ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ತಿರುಗೇಟು ನೀಡಿದ್ದಾರೆ.
ಶಾಸಕ ಸುನೀಲ್ ಕುಮಾರ್ ಅವರ ಟ್ವೀಟ್ ಗೆ ಕಾರ್ಕಳದಲ್ಲಿ ತಿರುಗೇಟು ನೀಡಿರುವ ಪ್ರಮೋದ್ ಮುತಾಲಿಕ್ ಅವರು, ಸುನಿಲ್ ಕುಮಾರ್ ಅವರ ಹೇಳಿಕೆಯಿಂದ ಅವರು ಆತಂಕಕ್ಕೆ ಒಳಗಾಗಿ ಹತಾಶೆಯ ಮನೋಭಾವನೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಮುತಾಲಿಕ್ ಹಣ ಮಾಡುವವನಲ್ಲ, ದುಡ್ಡಿಗೋಸ್ಕರ ನಾನು ಬೆಳಗಾವಿಯಿಂದ ಕಾರ್ಕಳಕ್ಕೆ ಬರಬೇಕಾಗಿಲ್ಲ. ದುಡ್ಡೇ ಗಳಿಸಬೇಕಾಗಿದ್ದರೆ ನನಗೆ 45 ವರ್ಷ ಬೇಕಾಗಿರಲಿಲ್ಲ ಸುನಿಲ್ ಕುಮಾರ್ ಅವರೇ ನೀವು ಏನು ಆಗಿದ್ರಿ ಈಗೇನು ಆಗಿದ್ದೀರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ ಈ ಆರೋಪ ನಿಮಗೆ ಶೋಭೆ ತರೋಲ್ಲ ಎಂದು ಟೀಕಿಸಿದ್ದಾರೆ.
ಉಡುಪಿ : ಅಕ್ರಮ ಮಾದಕ ದ್ರವ್ಯ ಸಾಗಾಟ, ಸೇವನೆ : ಇಬ್ಬರು ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲು – Vishwanews24
ಹಾಗೂ ಕಾರ್ಕಳದ 40 ಹಳ್ಳಿ ತಲುಪಲು ನಾನೊಬ್ಬನೆ ಪಾದಯಾತ್ರೆ ಮಾಡಲು ಸಾಧ್ಯವಿಲ್ಲ ನನ್ನ ಬಳಿ ಹಣವಿಲ್ಲ. ಯಾವುದೇ ರೀತಿಯ ಆಸ್ತಿ ಇಲ್ಲ. ನಾನು ನಿಮ್ಮ ತರ ಆಸ್ತಿ ಬ್ಯಾಂಕ್ ಬ್ಯಾಲೆನ್ಸ್, ಬೇನಾಮಿ ಜಮೀನು ಮಾಡಿದ್ದರೆ ಹಣ ಕೇಳುತ್ತಿರಲಿಲ್ಲ. ಕಾರ್ಯಕರ್ತರ ಓಡಾಟ, ಊಟ, ತಿಂಡಿ, ಪ್ರವಾಸಕ್ಕೆ ನೂರು ರೂಪಾಯಿ ಕೇಳಿದ್ದೇನೆ. ಮತದಾರರಿಗೆ ಡೋಂಗಿ ಹಿಂದೂವಾದ, ಭ್ರಷ್ಟಾಚಾರ ವಿರುದ್ಧ ಹೋರಾಡಲು, ಅಸಲಿ ಹಿಂದುತ್ವ ತೋರಿಸಿ ಕೊಡಲು ಮತದ ಜೊತೆ ಮತದಾರರಿಂದ ನೂರು ರೂಪಾಯಿ ಕೇಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.
